ಬೆಳಗಾವಿ : ದಿಢೀರನೆ ಇಳಿದ ಈರುಳ್ಳಿ ಬೆಳೆ, ಕಂಗಾಲಾಗಿರುವ ರೈತರು…
ಇಷ್ಟು ದಿನ ಬೆಲೆ ಏರಿಕೆಯಾಗಿ ಗ್ರಾಹಕರ ಕಣ್ಣಲ್ಲಿ ನೀರುತರಿಸಿದ್ದ ಈರುಳ್ಳಿ ಈಗ ಉತ್ಪಾದಕರ ಕಣ್ಣಲ್ಲಿ ನೀರುತರಿಸುತ್ತಿದೆ.

ಹಠಾತ್ತನೆ ಬೆಲೆ ಇಳಿಕೆಯಾಗಿದ್ದರಿಂದ ಈರುಳ್ಳಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.
ಹೌದು, ಇಷ್ಟು ದಿನ ಬೆಲೆ ಏರಿಕೆಯಾಗಿ ಗ್ರಾಹಕರ ಕಣ್ಣಲ್ಲಿ ನೀರುತರಿಸಿದ್ದ ಈರುಳ್ಳಿ ಈಗ ಉತ್ಪಾದಕರ ಕಣ್ಣಲ್ಲಿ ನೀರುಸುರಿಸುತ್ತಿದೆ.
ಈರುಳ್ಳಿ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡು ಬಂದಿದ್ದು, ಈರುಳ್ಳಿ ಬೆಳೆಗಾರರಿಗೆ ಆತಂಕ ಎದುರಾಗಿದೆ. ಬೆಳಗಾವಿ ಸೇರಿದಂತೆ ಮಹಾರಾಷ್ಟ್ರದ ಈರುಳ್ಳಿ ಬೆಳಗಾವಿಯ ಎ.ಪಿ.ಎಂ.ಸಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ನೆರೆಯ
ಮಹಾರಾಷ್ಟ್ರದಲ್ಲಿಯೂ ಈರುಳ್ಳಿ ಬೆಲೆ ಕುಸಿದಿದೆ. ಹೀಗಾಗಿ ಬೆಳಗಾವಿ ಎಪಿಎಂಸಿ ಮಾರುಕಟ್ಟೆಗೆ ಈರುಳ್ಳಿ ತೆಗೆದುಕೊಂಡು ಬಂದ ರೈತ ಪೇಚಿಗೆ ಸಿಲುಕಿದ್ದಾನೆ.

ಬಂದ ದಾರಿಗೆ ಸುಂಕವಿಲ್ಲವೆಂಬಂತೆ, ಬಂದ ದರಕ್ಕೆ ಈರುಳ್ಳಿ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ.
ಒಂದು ಏಕರೆ ಈರುಳ್ಳಿ ಬೆಳೆಯಲು 70 ರಿಂದ 80 ಸಾವಿರ ರೂಪಾಯಿ ಖರ್ಚು ಮಾಡುವ ಈರುಳ್ಳಿ ಬೆಳೆಗಾರನಿಗೆ ಸಂಕಷ್ಟ ಎದುರಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ 13 ರಿಂದ 15 ನೂರು ರುಪಾಯಿಗೆ ಒಂದು ಕ್ವಿಂಟಲ್ ಈರುಳ್ಳಿ ಖರೀದಿಸಲಾಗುತ್ತಿದ್ದು, ಈರುಳ್ಳಿ ಬೆಳೆಗಾರ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ