ಕೊರೊನಾ ಮಹಾಮಾರಿ ಯಾವ ವಲಯವನ್ನೂ ಬಿಡದೆ ಕಾಡುತ್ತಿದೆ. ಸ್ವಲ್ಪ ಯಾಮಾರಿದರೂ ಎಲ್ಲಿ ಸೋಂಕು ತಗುಲುತ್ತದೆಯೋ ಎಂಬ ಭಯ ಆವರಿಸಿಕೊಂಡಿದೆ. ಲಾಕ್ಡೌನ್ ಸಡಿಲದ ನಂತರ ಕೊರೊನಾ ಸೋಂಕು ತನ್ನ ಆರ್ಭಟವನ್ನು ಹೆಚ್ಚು ಮಾಡಿದೆ.
ಲಾಕ್ಡೌನ್ನಿಂದಾಗಿ ಸೀರಿಯಲ್ ಹಾಗು ಸಿನಿಮಾ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. ಆದರೆ ಲಾಕ್ಡೌನ್ ಸಡಿಲಿಕೆಯ ನಂತರ ಮತ್ತೆ ಶೂಟಿಂಗ್ಗೆ ಅನುಮತಿ ನೀಡಲಾಗಿತ್ತು. ಇದೀಗ ಶೂಟಿಂಗ್ ಸ್ಥಳಕ್ಕೂ ಕೊರೊನಾ ದಾಂಗುಡಿ ಇಟ್ಟಿದೆ.
ಹೌದು, ಇದು ಹೈದರಾಬಾದ್ನಲ್ಲಿ ನಡೆದಿರುವ ಘಟನೆ. ಇಲ್ಲಿನ ಸೀರಿಯಲ್ ನಟರೊಬ್ಬರಿಗೆ ಪಾಸಿಟಿವ್ ಆಗಿದೆ. ಹೀಗಾಗಿ ಆ ಧಾರಾವಾಹಿ ಶೂಟಿಂಗ್ ಸ್ಥಗಿತಗೊಳಿಸಲಾಗಿದೆ. ಇನ್ನು ಈ ಸೀರಿಯಲ್ ನಟ ಮತ್ತೆರಡು ಧಾರಾವಾಹಿಯಲ್ಲಿ ಪಾಲ್ಗೊಂಡಿದ್ದರಂತೆ ಹಾಗಾಗಿ ಆ ಧಾರಾವಾಹಿ ಶೂಟಿಂಗ್ಗಳನ್ನು ಸ್ಥಗಿತಗೊಳಿಸಿದ್ದು, ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
 Laxmi News 24×7
Laxmi News 24×7
				 
		 
						
					 
						
					