ಬೆಂಗಳೂರು: ನನಗೂ ಜ್ಯೋತಿಷ್ಯ ಶಾಸ್ತ್ರದ ಚಟವಿದೆ. ಆರ್. ಅಶೋಕ ಬೋರ್ಡ ಹಾಕಿಕೊಂಡಿದ್ದಾರೆ. ಸ್ವಲ್ಪ ಸಮಯ ತೆಗೆದುಕೊಂಡು ತಾವೂ ಕೂಡ ಅವರ ಬಳಿ ಜ್ಯೋತಿಷ್ಯ ಕೇಳಿ ಬರುತ್ತೇನೆಂದು ಸಿಎಂ ಬದಲಾವಣೆ ಭವಿಷ್ಯ ನುಡಿದಿರುವ ವಿಪಕ್ಷ ನಾಯಕ ಆರ್. ಅಶೋಕ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದರು.
ಸಿಎಂ ಬದಲಾವಣೆಗೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್. ಅಶೋಕ ನೀಡಿರುವ ಹೇಳಿಕೆ ಟಾಂಗ್ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನನಗೂ ಜ್ಯೋತಿಷ್ಯ ಶಾಸ್ತ್ರದ ಚಟವಿದೆ. ಆರ್. ಅಶೋಕ ಬೋರ್ಡ ಹಾಕಿಕೊಂಡಿದ್ದಾರೆ. ಸ್ವಲ್ಪ ಸಮಯ ತೆಗೆದುಕೊಂಡು ತಾವೂ ಕೂಡ ಅವರ ಬಳಿ ಜ್ಯೋತಿಷ್ಯ ಕೇಳಲು ಹೋಗುವುದಾಗಿ ತಿಳಿಸಿದರು.
ಇನ್ನು ಜೆಡಿಎಸ್ ಶಾಸಕರ ಬಗ್ಗೆ ತಾವು ಮಾತನಾಡಿಲ್ಲ. ಬಹಳಷ್ಟು ಜನತಾ ದಳದ ಕಾರ್ಯಕರ್ತರು ತಮ್ಮ ಭವಿಷ್ಯವನ್ನು ನೋಡಿಕೊಳ್ಳುತ್ತಿದ್ದಾರೆ. ಹಲವಾರು ಜನರು ಕಾಂಗ್ರೆಸಗೆ ಸೇರ್ಪಡೆಯಾಗಲು ಯೋಚಿಸುತ್ತಿದ್ದಾರೆ. ಜ್ಯಾತ್ಯಾತೀತವಾಗಿ ಕೆಲಸ ಮಾಡಲು ಇಚ್ಛಿಸುವವರು ನಮ್ಮ ಪಕ್ಷಕ್ಕೆ ಸೇರಬಹುದು ಎಂದರು. ಯಾವುದೇ ಶಾಸಕರೂ ನಮ್ಮನ್ನು ಸಂಪರ್ಕಿಸಿಲ್ಲ. ಇದೆಲ್ಲ ಊಹಾಪೋಹ ಎಂದರು.