Breaking News

ಮುಂದಿನ ಮೂರುವರೆ ವರ್ಷ ನಮ್ಮ ಸರ್ಕಾರಕ್ಕೆ ಏನು ಆಗಲ್ಲ : ಸಚಿವ ಪ್ರಿಯಾಂಕಾ ‌ಖರ್ಗೆ

Spread the love

ನಮ್ಮ ಬೇವರು, ನಮ್ಮ ದುಡಿಮೆ ಅವರಿಗೆ ಬೇಕಂತೆ ನೆರವು ಕೇಳೋದು ತಪ್ಪಾ. ನಮ್ಮಿಂದ ತಾನೇ ದೇಶ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗ್ತಾ ಇದೆ. ಬಜೆಟ್ ಮೇಲೆ ನಮಗೆ ನಿರೀಕ್ಷೆ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಮೋದಿಯವರ ಮಾಸ್ಟರ್ ಸ್ಟ್ರೋಕ್ ನಿಂದ ನಿರುದ್ಯೋಗ ತಾಂಡವ ಆಡ್ತಾ ಇದೆ. ಮಧ್ಯಮ ವರ್ಗ ನಿರ್ನಾಮವಾಗಿದೆ.
ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡ್ತಾ ಇದ್ದಾರೆ. ಕರ್ನಾಟಕ ಎರಡನೇ ಹೆಚ್ಚು ಐಟಿ ಕಂಪನಿ ಹೊಂದಿರುವ ರಾಜ್ಯ.‌ ನಾವು 100 ರೂಪಾಯಿ ಟ್ಯಾಕ್ಸ್ ಕಟ್ಟಿದ್ರೆ 12 ರೂಪಾಯಿ ಕೊಡ್ತಾರೆ.‌ಯುಪಿ ಅವರಿಗೆ 120, ಬಿಹಾರ 178 ರೂಪಾಯಿ ಹೋಗ್ತಾ ಇದೆ.ಇಡೀ ಭಾರತ ದೇಶವನ್ನು ನಾವು ಸಮರ್ಥವಾಗಿ ನಡೆಸಿಕೊಂಡು ಹೋಗ್ತಾ ಇದ್ದೇವೆ.‌ ನಮ್ಮ ರಾಜ್ಯದಿಂದ ಲೇ ಅತೀ ಹೆಚ್ಚು ಉದ್ಯೋಗ ಸೃಷ್ಟಿ ಆಗ್ತಿರೋದು
ಅದಕ್ಕೆ ಯಾವುದೇ ನೆರವು ನೀಡೋದಿಲ್ಲ ಅಂದ್ರೆ ಹೇಗೆ..?ಬಜೆಟ್ ಮೇಲೆ ನನಗೆ ಯಾವುದೇ ನಿರೀಕ್ಷೆ ಇಲ್ಲ. ಕಳೆದ ಹತ್ತು ವರ್ಷದಿಂದ ನೋಡಿಕೊಂಡು ಬಂದಿದ್ದೇನೆ. ಅದರ ಆಧಾರದ ಮೇಲೆ ಮಾತನಾಡುತ್ತಿದ್ದೇನೆ ಎಂದರು.

ರಾಜ್ಯದ ಅನುದಾನ ಕಳೆದ ಬಾರಿ ಕೇಳಿದ್ದೆ ಇದುವರೆಗೂ ಬಂದಿಲ್ಲ.ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ ಮನವಿ ಪತ್ರ ಕೊಡದೆ ನಾವು ನಮ್ಮ ಹಕ್ಕಿಗಾಗಿ ಪ್ರತಿಭಟನೆ ಮಾಡಿದ್ದೇವೆ. ಆದರೂ ಕೂಡ ಕೇಂದ್ರದವರು ಕೊಡಲ್ಲ ಅಂದ್ರೆ? ಕೇಂದ್ರ ಸರ್ಕಾರದಿಂದ ಏನು ಬಂದಿಲ್ಲ ಅಂದ್ರೆ ಕಷ್ಟ ಆಗುತ್ತೆ ಎಂದರು.

ಪ್ರಭಾವಿ ಸಚಿವರ ಸಭೆ ವಿಚಾರವಾಗಿ ಮಾತನಾಡಿ, ಅವರು ಮುಂದಿನ ಮೂರುವರೆ ವರ್ಷ ನಮ್ಮ ಸರ್ಕಾರಕ್ಕೆ ಏನು ಆಗಲ್ಲ. ನಮ್ಮ ಮನೆಗೆ, ನಾವು ಅವರ ಮನೆಗೆ ಹೋಗಲೇ ಬಾರದಾ? ಎರಡಮೂರು ದಿನಕ್ಕೊಮ್ಮೆ ನಾನು ಗೃಹ ಸಚಿವರ ಮನೆಯಲ್ಲೇ ಇರ್ತೇನೆ. ನಮ್ಮ ಪಕ್ಷದವರು ಕೂಡ ಹೋಗಬಾರದು ಅಂದ್ರೆ ಹೇಗೆ? ಪರಮೇಶ್ವರ, ಸುರ್ಜೆವಾಲಾ, ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ. ಕರ್ನಾಟಕದ ಬಗ್ಗೆ ಆಗ್ತಾ ಇರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿ
ನಾವು ಮೂರುವರೆ ವರ್ಷ ಒಳ್ಳೆಯ ಆಡಳಿತ ಕೊಡ್ತೇವೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಸಮರ್ಥನೆ ನೀಡಿದ ಅವರು, ಗಂಗಾ ಸ್ನಾನ ಮಾಡಿದ್ರೆ ಪಾಪ ಪರಿಹಾರ ಆಗುತ್ತಾ? ಬಿಜೆಪಿ ಅವರು ಹಿಂದೂ ವಿರೋಧಿ ಅಂತಾರೆ. ನಮ್ಮ ದೇಶದಲ್ಲಿ ಬುದ್ದಿಸಮ್, ಜೈನಿಸಮ್, ಸಿಖ್ ಹಾಗೂ ಲಿಂಗಾಯತ ಧರ್ಮಗಳು ಹುಟ್ಟಿವೆ. ಈ ನಾಲ್ಕು ಧರ್ಮಗಳು ಹುಟ್ಟಿದ್ದು ಹಿಂದೂ ಧರ್ಮದ ವಿರುದ್ಧವಾಗಿ ಯಾವುದರಲ್ಲಿ ಸಮಾನತೆ, ಸ್ವಾಭಿಮಾನ ಇರಲಿಲ್ಲ ಅದರ ವಿರುದ್ಧ ಹುಟ್ಟಿವೆ.‌ಬಸವಣ್ಣ ಅವರು ದೇಶ ದ್ರೋಹಿ ನಾ? ಹಿಂದೂ ವಿರೋಧಿನಾ? ಬಿಜೆಪಿ ಅವರಿಗೆ ಕಾಮನ್ ಸೆನ್ಸ್ ಇದೆಯಾ?
ಕೇವಲ ಗಂಗಾ ಅಷ್ಟೇ ಅಲ್ಲ. ದೇಶದ ಯಾವುದೇ ನದಿಯಲ್ಲಿ ಹೋಗಿ ಡುಮಕಿ ಹಾಕಿದ್ರೆ ಪಾಪ ಪರಿಹಾರ ಆಗೋದಿಲ್ಲ. ನಾವು ದುಡಿತಾ ಇರೋದಕ್ಕೆ ಅನುದಾನ ಕೊಡಿ ಸಾಕು ನಮಗೆ ದೇಶ ದ್ರೋಹಿ ಸರ್ಟಿಫಿಕೇಟ್ ಕೊಡೋಕೆ ಇವರ್ಯಾರು ಎಂದು ಪ್ರಶ್ನಿಸಿದರು.

ಎಕನಾಮಿಕ್ ಸರ್ವೇ ರಿಪೋರ್ಟ್ ಮುಚ್ಚಿ ಹಾಕೋಕೆ ಹೀಗೆಲ್ಲಾ ಮಾಡ್ತಾ ಇದ್ದಾರೆ. ಟ್ರಂಪ್ ಇನ್ವಿಟಷನ್ ಕೊಡಲಿಲ್ಲ ಇಂತಹ ವಿಷಯಗಳ ಮೂಲಕ ಅದನ್ನ ಮುಚ್ಚಿ ಹಾಕೋ ಯತ್ನ ಇದಾಗಿದೆ.‌ರಾಷ್ಟ್ರಪತಿಗಳ ಕುರಿತು ಸೋನಿಯಾ ಗಾಂಧಿ ಹೇಳಿಕೆಗೆ ಪ್ರಿಯಾಂಕ್ ಸಮರ್ಥನೆ ಮಾಡಿಕೊಂಡ ಅವರು,ಮುಖ್ಯಮಂತ್ರಿಗಳು ಮೂರುವರೆ ಗಂಟೆ ಭಾಷಣ ಮಾಡಿದ್ರು ಇಂಗ್ಲಿಷ್ ನಲ್ಲಿ ಟ್ರಾನ್ಸಲೆಟ್ ಮಾಡಿಯಾವ ಕಡೆ ಕಾನ್ಸನ್ಟ್ರೇಟ್ ಮಾಡಬೇಕು. ಮಲ್ಲಿಕಾರ್ಜುನ ಖರ್ಗೆ ಪೂಜೆ ಮಾಡಿದ ಫೋಟೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿಖರ್ಗೆ ಸಾಹೇಬ್ರು ಬುದ್ಧ, ಬಸವ, ಅಂಬೇಡ್ಕರ್ ಮೇಲೆ ನಂಬಿಕೆ ಇಟ್ಟವರು. ಅವರ ಆಚರಣೆ ನನ್ನ ಮೇಲೆ, ನನ್ನ ಆಚರಣೆ ನನ್ನ ಮಕ್ಕಳ ಮೇಲೆ ಆಗೋದಿಲ್ಲ.

ನಿಮ್ಮ ಭಕ್ತಿ ನಿಮಗೆ, ನಮ್ಮ ಭಕ್ತಿ ನಮಗೆ. ಭಕ್ತಿ ಆಧ್ಯಾತ್ಮಿಕವಾಗಿ ಇರಬೇಕು, ಮನಶಾಂತಿಗಾಗಿ ಇರ್ಬೇಕು. ಭಕ್ತಿ ವ್ಯಕ್ತಿಗೆ ಬಂದ್ರೆ ಸರ್ವಧಿಕಾರಿ ಆಗ್ತಾನೆ ಅಂತ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ರು. ಇಡಿ ಯಾಕೆ ಮುಡಾ ತನಿಖೆ ಮಾಡ್ತಾ ಇದೆ?‌ಮನಿ ಲ್ಯಾಡರಿಂಗ್ ನಲ್ಲಿ ಸಿದ್ದರಾಮಯ್ಯ ಪಾತ್ರ ಇದೆ ಅಂತ ಬಿಂಬಿಸಿದ್ದಾರೆ. ವಿಜಯೇಂದ್ರ ಸಲ್ಲಿಸಿರೋ ಅಫಿಡೆವಿಟ್ ನಲ್ಲಿ ಮನಿ ಲ್ಯಾಂಡರಿಂಗ್ ಅಂಶವಿದೆ.
ಆದರೆ ವಿಜಯೇಂದ್ರ ಅವರ ವಿಚಾರ ಇದುವರೆಗೂ ಬಹಿರಂಗಗೊಂಡಿಲ್ಲ.
ಸಿದ್ದರಾಮಯ್ಯ ಅವರದ್ದು ಹೇಗೆ ಆಚೆ ಬರುತ್ತೆ. ಇದೆಲ್ಲ ಪೂರ್ವ ನಿಯೋಜಿತ ಅಷ್ಟೇ. ಅಷ್ಟು ಇದ್ದಿದ್ರೆ ಮೇಲೆ ಕೂತ ಇಬ್ಬರು ಬಿಡ್ತಾ ಇದ್ರ ಎಂದರು.

 


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

Spread the loveಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ