*ಗೋಕಾಕ್*- ರೈತ ಸಮೂಹಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಲು ಪಕ್ಷಾತೀತವಾಗಿ ಶ್ರಮಿಸುವಂತೆ ಶಾಸಕ ಮತ್ತು ಬೇಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ತಾಲ್ಲೂಕಿನ ಕೌಜಲಗಿ ಪಿಕೆಪಿಎಸ್ ನೂತನ ಆಡಳಿತ ಮಂಡಳಿಯಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ರೈತರ ಹಿತ
ದ್ರಷ್ಟಿಯಿಂದ ಉತ್ತಮವಾದ ಸೇವೆ ಸಲ್ಲಿಸುವ ಮೂಲಕ ರೈತ ವರ್ಗದ ಪ್ರೀತಿ
ಸಂಪಾದಿಸಿಕೊಳ್ಳುವಂತೆ ಅವರು ಕಿವಿಮಾತು ಹೇಳಿದರು.
ರೈತರ ಆರ್ಥಿಕ ಅಭಿವೃದ್ದಿಗೆ ನೂತನ ಆಡಳಿತ ಮಂಡಳಿಯು ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಜೊತೆಗೆ ಸಾಲ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಬಿಡಿಸಿಸಿ ಬ್ಯಾಂಕ್ನಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಸಂಘವನ್ನು ಅಭಿವೃದ್ದಿ ಮಾಡುವಂತೆಯೂ ಅವರು ಸಲಹೆ ನೀಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು
ಪಿಕೆಪಿಎಸ್ ದಿಂದ ಸತ್ಕರಿಸಲಾಯಿತು.
ಜಿ. ಪಂ. ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ ಅವರ ನೇತೃತ್ವದಲ್ಲಿ ಸಂಘದ ಎಲ್ಲ ಸ್ಥಾನಗಳನ್ನು ಗೆಲ್ಲುವ ಮೂಲಕ ಕ್ಲೀನ್ ಸ್ವಿಪ್ ಗೆಲುವು ಕಂಡಿದೆ.
ಈ ಸಂದರ್ಭದಲ್ಲಿ ಪಿಕೆಪಿಎಸ್ ಗೆಲುವಿನ ರೂವಾರಿ ರಾಜೇಂದ್ರ ಸಣ್ಣಕ್ಕಿ, ಎಸ್.ಬಿ. ಲೋಕನ್ನವರ್, ನೂತನ ಅಧ್ಯಕ್ಷ ವೆಂಕಟೇಶ ದಳವಾಯಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ನಿಲೇಶ್ ಕೇವಟಿ, ಮಾಜಿ
ಪಿಕೆಪಿಎಸ್ ಅಧ್ಯಕ್ಷ ಮಹೇಶ್ ಪಟ್ಟಣಶೆಟ್ಟಿ, ಮಹಾಂತೇಶ್ ಶಿವನಮಾರಿ, ರಾಯಪ್ಪ ಬಳೊಳದಾರ್, ಶಂಕರ ಜೋತಿನ್ನವರ್, ಬಸವರಾಜ್ ಲೋಕನ್ನವರ್, ಬಸು ಜೋಗಿ, ಫಕ್ಕೀರಪ್ಪ ಪೂಜೆನ್ನವರ್, ಶ್ರೀಶೈಲ ಗಾಣಿಗೇರ, ಶಂಕರ ಚಚಡಿ, ಶಿವರಾಯಿ ಹಳ್ಳೂರ, ಮರೆನ್ನವರ್, ಗ್ರಾಮ ಪಂಚಾಯತಿ ಸದಸ್ಯರು,
ಪಿಕೆಪಿಎಸ್ ಸದಸ್ಯರು ಸೇರಿದಂತೆ ಅನೇಕರು ಉಪ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೂತನ ಆಡಳಿತ ಮಂಡಳಿಯ ಸದಸ್ಯರಿಗೆ ಶುಭ ಕೋರಿದರು.
*ಫೋಟೋ ಕ್ಯಾಪ್ಶನ್ – ೧೧ ಜಿಕೆಕೆ – ೦೧*.
*ಗೋಕಾಕ್* – ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಕೌಜಲಗಿ ಪಿ.ಕೆ. ಪಿ. ಎಸ್. ಆಡಳಿತ ಮಂಡಳಿಯ ಸದಸ್ಯರು ರಾಜೇಂದ್ರ ಸಣ್ಣಕ್ಕಿಯವರ ಮುಖಂಡತ್ವದಲ್ಲಿ ಶುಕ್ರವಾರ ರಾತ್ರಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ರಾಜೇಂದ್ರ ಸಣ್ಣಕ್ಕಿ, ಶಿವಾನಂದ ಲೋಕಣ್ಣವರ್, ಪಿಕೆಪಿಎಸ್ ನೂತನ ಅಧ್ಯಕ್ಷ ವೆಂಕಟೇಶ ದಳವಾಯಿ ಸೇರಿದಂತೆ ಅನೇಕರು ಉಪ್ಥಿತರಿದ್ದರು.