ಏಕಾಏಕಿ ಶಾಲೆಯ ಮೈದಾನಕ್ಕೆ ಬಂದು ಬಿದ್ದ ಅನಾಮಧೇಯ ಡ್ರೋನ್…
ಪೊಲೀಸರಿಗೆ ಮಾಹಿತಿ ಮುಟ್ಟಿಸಿದ ಶಾಲಾ ಸಿಬ್ಬಂದಿ
ಭೂತರಾಮನಹಟ್ಟಿ ಬಳಿಯ ಫಿನಿಕ್ಸ್ ಶಾಲೆಯಲ್ಲಿ ಘಟನೆ
ಕಾಕತಿ ಪೊಲೀಸರಿಂದ ಪರಿಶೀಲನೆ
ಶಾಲಾ ಆವರಣದಲ್ಲಿ ಬಿದ್ದ ಅನಾಮಧೇಯ ಡ್ರೋನ್ ನಿಂದ ಎರಡು ಗಂಟೆಗಳ ಕಾಲ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಕಾಲ ಕಳೆದ ಘಟನೆ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿಯ ಫಿನಿಕ್ಸ್ ಶಾಲೆಯಲ್ಲಿ ಸೋಮವಾರ ನಡೆದಿದೆ.
ಶಾಲೆ ಬಿಡುವ ಸಂದರ್ಭದಲ್ಲಿ ಏಕಾಏಕಿ ಮೈದಾನದಲ್ಲಿ ಬಿದ್ದ ವಿಮಾನ ಮಾದರಿಯ ಡ್ರೋನ್ ಬೀಳುತ್ತಿದ್ದಂತೆ ಆತಂಕದಲ್ಲಿದ್ದ ಶಿಕ್ಷಕರು.ತಕ್ಷಣ ಕಾಕತಿ ಠಾಣೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಡ್ರೋನ್ ವಶಕ್ಕೆ ತೆಗೆದುಕೊಂಡ ಪೊಲೀಸರು, ಡ್ರೋನ್ ಮೇಲಿದ್ದ ಸೀರಿಯಲ್ ನಂಬರ್ ದಿಂದ ವಿಳಾಸ ಪತ್ತೆ ಹಚ್ಚಿದ್ದಾರೆ.
ಖಾಸಗಿ ಕಂಪನಿಗೆ ಸೇರಿದ ಡ್ರೋನ್ ಎಂಬುದು ಬೆಳಕಿಗೆ ಬಂದಿದ್ದು, ಕಾಕತಿ ಠಾಣೆಗೆ ಕರೆಯಿಸಿಕೊಂಡು ಖಾಸಗಿ ಕಂಪನಿಯವರಿಂದ ದಾಖಲೆ ಪಡೆದು ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಕಂಪನಿಯ ಸಿಬ್ಬಂದಿಗಳು ಜಮೀನು ಸರ್ವೇ ಮಾಡುವುದಕ್ಕೆ ಡ್ರೋನ್ ಬಳಸುತ್ತಿರುವುದಾಗಿ ಹೇಳಿದ್ದಾರೆ. ಪೊಲೀಸರು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.