Breaking News

ಕಾಮಗಾರಿ ಮುಗಿಸಿ ಒಂದೂವರೆ ವರ್ಷ ಕಳೆದರೂ ದುಡ್ಡು ಕೊಡ್ತಿಲ್ಲ

Spread the love

ದಾವಣಗೆರೆ: ಕಾಮಗಾರಿ ಮುಗಿಸಿ ಒಂದೂವರೆ ವರ್ಷ ಕಳೆದರು ಅನುದಾನ ಬಿಡುಗಡೆಯಾಗಿಲ್ಲ. ವಯಸ್ಸಿಗೆ ಬಂದಿರುವ ಮಗಳಿಗೆ ಮದುವೆ ಮಾಡಲು ಹಣ ಇಲ್ಲದೆ ಗುತ್ತಿಗೆದಾರ ಅಸಹಾಯಕತೆಯಿಂದ ದಯಾಮರಣ ಕೋರಿ ಸಿಎಂ, ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

2022-23ನೇ ಸಾಲಿನ ವಿಶೇಷ ಅನುದಾನ ಅಡಿಯಲ್ಲಿ ಟೆಂಡರ್ ಕರೆದಿದ್ದರು. ಟೆಂಡರ್ ಪಡೆಯಲು ನಾನು ಭಾಗಿಯಾಗಿದ್ದೆ. ಹರಿಹರ ನಗರಸಭೆ ಹಾಗು ಜಿಲ್ಲಾಧಿಕಾರಿ ಅವರು ಕಾಮಗಾರಿ ಕಾರ್ಯದೇಶ ನೀಡಿದ್ದರು. ಅನುಮೋದನೆ ಆದ ಬಳಿಕ ಟೆಂಡರ್ ನನಗೆ ಸಿಕ್ಕಿತು.

ನಾನು ಸಾಲಸೋಲ ಮಾಡಿ ಕಾಮಗಾರಿ ಮಾಡಿದ್ದೇನೆ. ಕಾಮಗಾರಿಗಾಗಿ ಮೆಟಿರಿಯಲ್ ಖರೀದಿ ಮಾಡಿದ್ದೇನೆ. ಅದರ ಹಣ ಸಂದಾಯ ಮಾಡಬೇಕು. ಹಣ ಬಿಡುಗಡೆ ಮಾಡಿ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸಾಕಾಗಿದೆ.

ಹರಿಹರ ನಗರಸಭೆ ವ್ಯಾಪ್ತಿಯ 29ನೇ ವಾರ್ಡ್​ನ ಖಬರಸ್ಥಾನದಲ್ಲಿ ₹ 20 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದೇನೆ. 21ನೇ ವಾರ್ಡ್​ನಲ್ಲಿ 5 ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ ನಿರ್ಮಾಣ ಮಾಡಿದ್ದೇನೆ. ಕಾಮಗಾರಿ ಮುಗಿದಿದೆ, ಹಣ ಕೇಳಿದರೆ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ನನಗೆ 25 ಲಕ್ಷ ಹಣ ಬರಬೇಕಾಗಿದೆ. ನನ್ನ ಮಗಳ ಮದುವೆ ಇದೆ. ಮದುವೆ ದಿನಾಂಕ ನಿಗದಿ ಮಾಡಿಸಬೇಕಾಗಿದೆ. ಅದಕ್ಕಾಗಿ ನಾನು ದಯಾಮರಣ ಕೋರಿ ಸಿಎಂ ಸಿದ್ದರಾಮಯ್ಯ ಹಾಗು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದೇನೆ. ನಾನು ಕಣ್ಣು ಮುಚ್ಚಬಹುದು,

ಆ ದೇವರು ಅವರನ್ನು ನೋಡಿಕೊಳ್ಳಲಿ. ಕಳೆದ ಸರ್ಕಾರದಲ್ಲಿ ಹೀಗಾಯಿತು. ಇದೀಗ ಈ ಸರ್ಕಾರದಲ್ಲೂ ಅದೇ ಆಗುತ್ತಿದೆ. ಮೊದಲು ನನ್ನ ಕಾಮಗಾರಿ ನೋಡಿ ಹಣ ಬಿಡುಗಡೆ ಮಾಡಲಿ” ಎಂದು ಮನವಿ ಮಾಡಿಕೊಂಡರು.


Spread the love

About Laxminews 24x7

Check Also

ದಾನವೀರ ಶರಣ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ವರ್ಷದ ಜಯಂತ್ಯೋತ್ಸವ ಆಚರಣೆ

Spread the loveಸವದತ್ತಿ; ದಾನವೀರ ಶರಣ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ವರ್ಷದ ಜಯಂತ್ಯೋತ್ಸವ ಆಚರಣೆ ಧಾರವಾಡದ ಮುರುಗಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ