Breaking News

ರೈತ ಉತ್ಪಾದಕ ಸಂಸ್ಥೆಯಿಂದ ಮಿಶ್ರ ಬೇಸಾಯವಾದ ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಹಾಗೂ ಹಸು ಸಾಕಾಣಿಕೆಯ ಕುರಿತು ತರಬೇತಿ

Spread the love

ಹಾವೇರಿ : ವರ್ಷದಿಂದ ವರ್ಷಕ್ಕೆ ರೈತರ ಆತ್ಮಹತ್ಯೆಗಳ ಪ್ರಕರಣಗಳು ಅಧಿಕವಾಗುತ್ತಿವೆ. ಸರಿಯಾದ ಬೆಲೆ, ಸರಿಯಾದ ಇಳುವರಿ, ಸಮರ್ಪಕ ಗೊಬ್ಬರ, ಬಿತ್ತನೆ ಬೀಜ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅತಿಯಾದ ಮಳೆ, ಬರ ಸೇರಿದಂತೆ ಪ್ರಕೃತಿಯ ಹಲವು ವಿಕೋಪಗಳಿಂದ ಸಹ ರೈತರು ಸಾಲದ ಸುಳಿಗೆ ಸಿಲುಕಿ ನಲುಗುತ್ತಿದ್ದಾರೆ. ಆದರೆ ರೈತರು ಪರ್ಯಾಯ ಕೃಷಿಯಾದ ಮಿಶ್ರ ಬೇಸಾಯದ ಮೂಲಕ ಈ ರೀತಿಯ ಸಂಕಷ್ಟಗಳಿಂದ ಪಾರಾಗಬಹುದು ಎನ್ನುತ್ತಿದೆ ಹಾವೇರಿಯ ಗ್ರೀನ್​ಚಿಕ್​ ರೈತರ ಉತ್ಪಾದಕರ ಕಂಪನಿ.

ಈ ಕಂಪನಿ ರೈತರಿಗೆ ಮಿಶ್ರ ಬೇಸಾಯವಾದ ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಮತ್ತು ಹಸುಸಾಕಾಣಿಕೆ ಕುರಿತಂತೆ ತರಬೇತಿ ನೀಡುತ್ತಿದೆ. ಅಲ್ಲದೆ ತನ್ನ ಸದಸ್ಯರಿಗೆ ನಾಟಿ ಮತ್ತು ಬಿವಿ380 ತಳಿಯ ಕೋಳಿಗಳ ಸಾಕಾಣಿಕೆ ಬಗ್ಗೆ ಮಾಹಿತಿ ನೀಡುತ್ತೆ. ಸಾವಿರಕ್ಕೂ ಅಧಿಕ ಖಡಕನಾಥ್, ಬಿವಿ380, ಸ್ವರ್ಣದಾರಾ, ಕಾವೇರಿ, ಹಸೀಲ್ ಸೇರಿದಂತೆ ವಿವಿಧ ನಾಟಿ ತಳಿಯ ಕೋಳಿಗಳ ಸಾಕಾಣಿಕೆ ಮಾಡಿದೆ. ಈ ಕೋಳಿ ತಳಿಗಳ ಬಗ್ಗೆ ರೈತರಿಗೆ ತರಬೇತಿ ನೀಡುತ್ತಿದೆ.


Spread the love

About Laxminews 24x7

Check Also

ಮಿರಜ್‌ನಲ್ಲಿ 1 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳ ಜಪ್ತಿ

Spread the love ಚಿಕ್ಕೋಡಿ:ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿ ಇತ್ತಿಚಿಗೆ ವಿಶೇಷ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಪೊಲೀಸರು, ಬರೋಬ್ಬರಿ 1 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ