ಬೆಳಗಾವಿ: ವಾರದ ಸಂತೆಯ ದಿನವೇ ಪೊಲೀಸರಿಲ್ಲದೇ ಸಂಚಾರದಟ್ಟಣೆ ಹಿನ್ನೆಲೆ ಕಿರಿಕಿರಿ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಳಗಾವಿಗರಿಂದ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.
ಈ ದೃಶ್ಯಗಳನ್ನು ನೋಡಿ ನೀವು ಇದು ಪಾರ್ಕಿಂಗ್ ಲೇಔಟ್ ಇರಬೇಕು ಅಂದುಕೊಂಡಿರಾ? ಅಲ್ಲ . ಇದು ಬೆಳಗಾವಿಯ ಪ್ರಮುಖ ಮಾರುಕಟ್ಟೆಯಲ್ಲಿ ಒಂದಾದ ರವಿವಾರಪೇಠನ ದೃಶ್ಯಗಳಿವು. ಇಲ್ಲಿ ಅನೇಕ ಸಗಟು ವ್ಯಾಪಾಸ್ಥರ ಅಂಗಡಿಗಳಿವೆ. ಅಲ್ಲದೇ ಇನ್ನುಳಿದ ವಸ್ತುಗಳನ್ನು ಖರೀದಿಸಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಪ್ರತಿದಿನವು ಭಾರಿ ವಾಹನಗಳು ಇಲ್ಲಿ ಸಂಚರಿಸುತ್ತವೆ. ಆದರೇ ಇಲ್ಲಿ ಯೋಗ್ಯ ಸಂಚಾರ ನಿರ್ವಹಣೆಯಾಗದ ಹಿನ್ನೆಲೆ ಸಂಚಾರ ದಟ್ಟಣೆ ಉಂಟಾಗಿ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಇಲ್ಲಿಗೆ ಸಂಚಾರಿ ಪೊಲೀಸರು ಬರುವುದಿಲ್ಲ. ಬಂದರೂ ಬಸವೇಶ್ವರ ಬ್ಯಾಂಕಿನ ಮುಂದೆ ಉಂಟಾಗುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಮುಖ್ಯರಸ್ತೆಯ ಮೇಲೆ ಕಾಣಿಸಿಕೊಳ್ಳುವುದಿಲ್ಲ ಎಂಬುದು ಜನರ ದೂರಾಗಿದೆ.
ಪ್ರತಿದಿನವೂ ಇದೇ ಸಮಸ್ಯೆ ಇರುತ್ತದೆ. ವಾರದ ಸಂತೆಯ ದಿನವಾದ ಶನಿವಾರದಂದೂ ಇಲ್ಲಿಯೇ ಸಂಚಾರ ದಟ್ಟಣೆ ಹೇಳತೀರದಾಗಿದೆ. ಸಂಚಾರಿ ಪೊಲೀಸರು ಇತ್ತ ಗಮನಹರಿಸಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಬೇಕೆಂಬುದು ಬೆಳಗಾವಿಗರ ಒತ್ತಾಯವಾಗಿದೆ.