ರಾಜ್ಯದಲ್ಲಿ ಗೃಹ ಸಚಿವರಿದ್ದಾರೋ ಇಲ್ಲವೋ ಎಂಬುದನ್ನು ಕುಮಾರಸ್ವಾಮಿಗಳೇ ಹೇಳಲಿ – ಗೃಹ ಸಚಿವ ಜಿ. ಪರಮೇಶ್ವರ
ಸಭಾಧ್ಯಕ್ಷರು ಅನುಮತಿ ನೀಡಿದರೇ ಸಿ.ಟಿ. ರವಿ ವಿಡಿಯೋ ಪರಿಶೀಲನೆ
ಸಭಾಧ್ಯಕ್ಷರ ಅನುಮತಿಯಿಲ್ಲದೇ ಏನು ಸಾಧ್ಯವಿಲ್ಲ
ರಾಜ್ಯದಲ್ಲಿ ಗೃಹ ಸಚಿವರಿದ್ದಾರೋ ಇಲ್ಲವೋ ಎಂಬುದನ್ನು ಕುಮಾರಸ್ವಾಮಿಗಳೇ ಹೇಳಲಿ
ಗೃಹ ಸಚಿವ ಜಿ. ಪರಮೇಶ್ವರ ಹೇಳಿಕೆ
ಸಿ.ಟಿ ರವಿ ಅಶ್ಲೀಲ ಪದ ಬಳಕೆ ವಿಚಾರದಲ್ಲಿ ಸಭಾಧ್ಯಕ್ಷರು ಪತ್ರ ಬರೆದರೇ ಎಫ್.ಎಸ್.ಎಲಗೆ ಕಳುಹಿಸಿ ಪರಿಶೀಲಿಸಬಹುದಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಇಂದು ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ ರವಿ ಅಶ್ಲೀಲ ಪದ ಬಳಕೆ ಸಭಾಧ್ಯಕ್ಷರು ಇದು ಫೇಕ್ ವಿಡಿಯೋ ತೋರಿಸಲಾಗಿದೆ ಎಂದು ಗೃಹ ಇಲಾಖೆಗೆ ಪತ್ರ ಬರೆದು, ಇದನ್ನು ಪರಿಶೀಲಿಸಲು ತಿಳಿಸಬಹುದು. ವ್ಹಿಡಿಯೋವನ್ನು ಎಫ್.ಎಸ್.ಎಲಗೆ ಕಳುಹಿಸಿ ಪರಿಶೀಲಿಸಲಾಗುತ್ತದೆ. ಸಭಾಪತಿ ಅನುಮತಿಯಿಲ್ಲದೇ ಯಾರೂ ಏನೂ ಮಾಡೋಕೆ ಸಾಧ್ಯವಿಲ್ಲ. ಮೀಡಿಯಾದವರು ರಿಕಾರ್ಡ್ ಮಾಡಿದ್ದು ಹೊರಗಡೆ ಬಂದಿದೆ. ಪೊಲೀಸರು ಕೂಡ ಅದನ್ನೇ ಉಪಯೋಗಿಸಿದ್ದಾರೆ. ಸಭಾಪತಿಗಳಿಗೆ ಇರುವ ನಿಯಮದ ಅಡಿಯಲ್ಲಿ ಪೊಲೀಸರು ಕೆಲಸ ಮಾಡುತ್ತಾರೆ ಎಂದರು.
ಇನ್ನು ಕರ್ನಾಟಕದಲ್ಲಿ ಗೃಹ ಸಚಿವರು ಇದ್ದಾರಾ ಇಲ್ಲವೋ ಎಂಬುದನ್ನು ಕುಮಾರಸ್ವಾಮಿಗಳು ಎಂಬ ಸಚಿವ ಕುಮಾರಸ್ವಾಮಿಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ನಡೆದಿದೆಯೋ ಇಲ್ಲವೋ ಎಂಬುದನ್ನು ಅವರೇ ತಿಳಿಸಲಿ. ಯಾವ ರೀತಿ ಸರಿಯಾಗಿ ನಡೆದಿಲ್ಲ ಎಂಬುದನ್ನು ಅವರೇ ಹೇಳಲಿ. ಆಮೇಲೆ ಅದಕ್ಕೆ ಉತ್ತರ ನೀಡುತ್ತೇನೆ ಎಂದರು.