Breaking News

ಹೈಕಮಾಂಡ್​ ಎಚ್ಚರಿಕೆ ಕೊಟ್ಟರೂ ಕ್ಯಾರೇ ಎನ್ನದ ಯತ್ನಾಳ್ ಟೀಂ

Spread the love

ಬೆಳಗಾವಿ, (ಡಿಸೆಂಬರ್ 17): ಕರ್ನಾಟಕ ಬಿಜೆಪಿಯಲ್ಲಿನ ಬಣ ರಾಜಕೀಯ ಮುಂದುವರಿದಿದೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಟೀಂ ಸೈಲೆಂಟ್​, ವೈಲೆಂಟ್​ ಆಟ ಆಡುತ್ತಲೇ ಇದೆ.

ಹೈಕಮಾಂಡ್​ ಎಚ್ಚರಿಕೆ ಕೊಟ್ಟರೂ ಕ್ಯಾರೇ ಎನ್ನದ ಯತ್ನಾಳ್ ಟೀಂ, ತಮ್ಮ ಬಣ ರಾಜಕೀಯ ಮುಂದುವರಿಸಿದೆ.

.ಬಿಜೆಪಿ ರೆಬೆಲ್ ಟೀಮ್ ಮತ್ತೆ ಬೆಳಗಾವಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ವಕ್ಫ್ ವಿರುದ್ಧ 2ನೇ ಹಂತದ ಹೋರಾಟದ ಬಗ್ಗೆ ಮಹತ್ವ ಚರ್ಚೆ ನಡೆಸಿದೆ.

ಈ ಬಗ್ಗೆ ಸ್ವತಃ ಯತ್ನಾಳ್ ಬಣದ ಸದಸ್ಯ ರಮೇಶ್ ಜಾರಕಿಹೊಳಿ ಮಾಹಿತಿ ನೀಡಿದ್ದು, ಎರಡನೇ ಹಂತದ ಹೋರಾಟವನ್ನು ಡಿಸೆಂಬರ್ 26 ಮತ್ತು 27ರಂದು ಮಾಡಬೇಕೆಂದುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಪಕ್ಷದೊಳಗೆ ಇನ್ನೂ ಯಾವುದು ಸರಿ ಹೋಗಿಲ್ಲ ಎನ್ನುವುದಕ್ಕೆ ಇದು ಕೂಡ ಸಾಕ್ಷಿಯಾಗಿದೆ.ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ರಮೇಶ್ ಜಾರಕಿಹೊಳಿ, ಎಲ್ಲರು ಊಟಕ್ಕೆ ಸೇರಿದ್ದು, ಎರಡನೇ ಹಂತದ ವಕ್ಫ್ ವಿರುದ್ಧ ಹೋರಾಟದ ಬಗ್ಗೆ ಚರ್ಚೆ ಮಾಡಿದ್ದೇವೆ. ಡಿಸೆಂಬರ್ 26, 27ರಂದು ಎರಡನೇ ಹಂತದ ಹೋರಾಟದ ಬಗ್ಗೆ ಚರ್ಚೆಯಾಗಿದೆ. ಜನರ ಸಮಸ್ಯೆಗಳ ಅಭಿಪ್ರಾಯ ಸಂಗ್ರಹಕ್ಕೆ ರಾಜ್ಯಾದ್ಯಂತ ಹೋರಾಟ ನಡೆಸುತ್ತಿದ್ದೇವೆ 


Spread the love

About Laxminews 24x7

Check Also

ಗೋವುಗಳನ್ನು ಸ್ಥಳಾಂತರಿಸುತ್ತಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ಶ್ರೀರಾಮಸೇನೆ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿಹಾಕಿ ದೊಣ್ಣೆಯಿಂದ ಹೊಡೆದಿ

Spread the loveಗೋವುಗಳನ್ನು ಸ್ಥಳಾಂತರಿಸುತ್ತಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ಶ್ರೀರಾಮಸೇನೆ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿಹಾಕಿ ದೊಣ್ಣೆಯಿಂದ ಹೊಡೆದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ