Breaking News

10 ಭ್ರಷ್ಟ ಅಧಿಕಾರಿಗಳ ಆಸ್ತಿ, ಹಣ, ಚಿನ್ನ ಕಂಡು ಲೋಕಾಯುಕ್ತರೇ ಬೆರಗು,

Spread the love

ಲೋಕಾಯುಕ್ತ ಅಧಿಕಾರಿಗಳು ಕರ್ನಾಟಕದಾದ್ಯಂತ 10 ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ, ಚಿನ್ನ ಪತ್ತೆಯಾಗಿತ್ತು. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಗದಗ, ಕಲಬುರಗಿ, ರಾಯಚೂರು, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ದಾಳಿ ನಡೆದಿದೆ. ಡಿಹೆಚ್‌ಒ ಸುನಿಲ್ ಕುಮಾರ್ ಮತ್ತು ಡಿವೈಎಸ್ಪಿ ನಂಜುಂಡಯ್ಯ ಅವರ ಆಸ್ತಿಗಳ ಮೌಲ್ಯ ಅತಿ ಹೆಚ್ಚಾಗಿದೆ.

ಡಿಸೆಂಬರ್​ 11: ಮಂಗಳವಾರ (ಡಿಸೆಂಬರ್​ 10) ಬೆಳ್ಳಂಬೆಳಗ್ಗೆ ಲೋಕಾಯುಕ್ತ (Lokayukta) ಅಧಿಕಾರಿಗಳು ಕರ್ನಾಟಕದಾದ್ಯಂತ ಏಕಕಾಲಕ್ಕೆ ದಾಳಿ ಮಾಡಿದ್ದರು. ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಗದಗ, ಕಲಬುರುಗಿ, ರಾಯಚೂರು, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿನ 10 ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ್ದರು. ಈ ವೇಳೆ ಕೋಟ್ಯಾಂತರ ಮೌಲ್ಯದ ಆಸ್ತಿ, ಚಿನ್ನ ಪತ್ತೆಯಾಗಿದೆ. ಬೆಂಗಳೂರು ಒಂದರಲ್ಲೇ ಐದು ಕಡೆ ದಾಳಿ ಮಾಡಲಾಗಿತ್ತು.

ದಾಳಿಗೆ ಒಳಗಾದ 10 ಅಧಿಕಾರಿಗಳ ಚರಾಸ್ತು, ಸ್ಥಿರಾಸ್ತಿ ಮೌಲ್ಯ

  1. ಬೆಸ್ಕಾಂ ಅಧೀಕ್ಷಕ ಅಭಿಯಂತರ ಲಕೇಶ್ ಬಾಬು ಅವರ ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ 6,70,95,000 ಕೋಟಿ ರೂ.
  2. ಕಂದಾಯ ನಿರೀಕ್ಷಕ ಎಸ್.ಜಿ.ಸುರೇಶ್ ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ 1,82,61,215 ಕೋಟಿ ರೂ.
  3. ಬೆಂಗಳೂರು ಗ್ರಾಮಾಂತರ ಡಿಹೆಚ್​​ಒ ಸುನೀಲ್ ಕುಮಾರ್ ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ 6,63,90,000 ಕೋಟಿ ರೂ.
  4. ಬಿಬಿಎಂಪಿ ತೆರಿಗೆ ಇನ್ಸ್​ಪೆಕ್ಟರ್​​​ ಕೃಷ್ಣಪ್ಪ ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ 2,21,09,551 ಕೋಟಿ ರೂ.
  5. ಉನ್ನತ ಶಿಕ್ಷಣ ಇಲಾಖೆ ಉಪ ಕಾರ್ಯದರ್ಶಿ ಏಕೇಶ್ ಬಾಬು ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ 7,92,00,000 ಕೋಟಿ ರೂ. ಪತ್ತೆಯಾಗಿದೆ. ಇವರ ಮನೆಯಲ್ಲಿ ಹಣ ಎಣಿಸುವ ಮಷಿನ್ ಪತ್ತೆಯಾಗಿದೆ.
  6. ಚನ್ನಪಟ್ಟಣ ಪೊಲೀಸ್ ತರಬೇತಿ ಶಾಲೆ ಡಿವೈಎಸ್​ಪಿ ನಂಜುಂಡಯ್ಯ ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ 12,53,00,225 ಕೋಟಿ ರೂ.
  7. ಗದಗ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗ ಎಸ್​ಡಿಎ ಲಕ್ಷ್ಮಣ ಕೊನೆರಪ್ಪ ಕರ್ಣಿ ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ 2,01,81,000 ಕೋಟಿ ರೂ.
  8. ಕಲಬುರಗಿ ಮಹಾನಗರ ಪಾಲಿಕೆ ಅಧೀಕ್ಷಕ ಅಭಿಯಂತರ ರಾಮಪ್ಪ ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ 3,58,46,000 ಕೋಟಿ ರೂ.
  9. ಕೊಪ್ಪಳ ಅಬಕಾರಿ ನಿರೀಕ್ಷಕ ರಮೇಶ್ ಅಗಡಿ ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ ₹1,61,23,175
  10. ಹಿರಿಯೂರು ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಎಸ್.ಸುರೇಶ್ ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ 3,50,14,417 ಕೋಟಿ ರೂ.

ಈವರೆಗಿನ ಮಾಹಿತಿ ಪ್ರಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಹೆಚ್​ಒ ಸುನಿಲ್ ಕುಮಾರ್ ಮತ್ತು ಡಿಎಸ್​ಪಿ ನಂಜುಡಯ್ಯ ಹಣದ ತಿಮಿಂಗಿಲಗಳಾಗಿದ್ದಾರೆ. ರಾಜಾನುಕುಂಟೆ ಬಳಿ ಇರುವ ನಂಜುಂಡಯ್ಯ ಅವರ ನಿವಾಸ ಕಂಡು ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದರು.‌ ಇದು ಮನೆಯೋ ಅಥವಾ ಅರಮನೆಯೋ ಎಂದು ಬೆರಗಾಗಿದ್ದರು. ಮನೆಯೊಳಗೆ ಐಶಾರಾಮಿ ವ್ಯವಸ್ಥೆ ಇತ್ತು. ಸ್ವಿಮ್ಮಿಂಗ್ ಪೂಲ್, ಜಿಮ್ ಮತ್ತು ಥಿಯೇಟರ್ ನಂತಹ ಐಶಾರಾಮಿ ವ್ಯವಸ್ಥೆ ಮನೆಯಲ್ಲಿತ್ತು.


Spread the love

About Laxminews 24x7

Check Also

ವಿಪಕ್ಷ ಬಿಜೆಪಿಗೆ ಮಗ್ಗಲು ಮುಳ್ಳಾದ ಯತ್ನಾಳ್..ಅಶೋಕ್ ಹೊಸ ಪ್ಲ್ಯಾನ್

Spread the loveಬೆಂಗಳೂರು, (ಡಿಸೆಂಬರ್ 08): ಕಾಂಗ್ರೆಸ್ ಪಡೆಗೆ ಚುಚ್ಚಲು ಬಿಜೆಪಿ ಅಸ್ತ್ರಗಳನ್ನು ರೆಡಿ ಮಾಡಿಕೊಂಡಿದೆ. ಮುಡಾ, ವಾಲ್ಮೀಕಿ, ವಕ್ಫ್, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ