ಬೈಲಹೊಂಗಲದ ಶ್ರೀ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ಎಸ್.ಜಿ.ವ್ಹಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ‘ಈಶಾ ಮಲ್ಟಿ ಸ್ಪೇಷಾಲಿಟಿ ಘಟಕ’ ಇದರ ಉದ್ಘಾಟನಾ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾಗಿರುವ ಮೂರುಸಾವಿರ ಮಠದ ಶ್ರೀ ಮ.ನಿ.ಪ್ರ.ಸ್ವ ನೀಲಕಂಠ ಮಹಾಸ್ವಾಮಿಗಳು, ಹೊಸೂರು ಮಡಿವಾಳೇಶ್ವರ ಮಠದ ಶ್ರೀ ಮ.ನಿ.ಪ್ರ.ಸ್ವ ಗಂಗಾಧರ್ ಮಹಾಸ್ವಾಮಿಗಳು, ಬೈಲಹೊಂಗಲ ಶಾಸಕರಾದ ಮಹಾಂತೇಶ್ ಕೌಜಲಗಿ, ಚನ್ನಮ್ಮ ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ, ಶಿವರಂಜನ್ ಬೋಳಣ್ಣವರ, ಮಹಾಂತೇಶ್ ಮತ್ತಿಕೊಪ್ಪ ಶಂಕರ ಮಾಡಲಗಿ, ಎಸ್.ಎಸ್.ಸಿದ್ದಣ್ಣವರ, ಶ್ರೀನಿವಾಸ್ ಬನ್ನಿಗೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.