ಡಿಸೆಂಬರ್ 05: ಕೊವಿಡ್ನಲ್ಲಿ ಮನೆ ಯಜಮಾನ ಸಾವನ್ನಪ್ಪುತ್ತಾರೆ. ಇಬ್ಬರು ಮಕ್ಕಳನ್ನ ಕಟ್ಟಿಕೊಂಡು ತಾಯಿ ಜೀವನ ನಡೆಸುತ್ತಿರುತ್ತಾರೆ. ಗಂಡು ದಿಕ್ಕಿಲ್ಲದ ಮನೆಗೆ ಅವನೊಬ್ಬ ಸಹಾಯ ಮಾಡುವ ನೆಪದಲ್ಲಿ ಮನೆಗೆ ಎಂಟ್ರಿಯಾಗುತ್ತಾರೆ. ಹೀಗೆ ಬಂದವನು ಇಡೀ ಮನೆಯನ್ನೇ ಸರ್ವನಾಶ ಮಾಡಿ, ತಾಯಿ ಮಗನನ್ನ ಕೊಂದು (kill) ರಣಕೇಕೆ ಹಾಕಿದ್ದಾರೆ. ಅಷ್ಟಕ್ಕೂ ಆ ಮನೆಯಲ್ಲಿ ನಿನ್ನೆ ರಾತ್ರಿ ಆಗಿದ್ದೇನೂ? ಆಪ್ತನಂತಿದ್ದವನೂ ಕೊಲೆ ಮಾಡಲು ಕಾರಣವೇನು ಎಂಬ ನಿಮ್ಮ ಪ್ರಶ್ನೆಗೆ ಮುಂದೆ ಉತ್ತರವಿದೆ ಓದಿ.
ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ ಹೊರ ವಲಯದ ತೋಟದ ಮನೆಯಲ್ಲಿ ಒಂದಲ್ಲಾ ಜೋಡಿ ಕೊಲೆ ಆಗಿದ್ದು, ಇದರಿಂದ ಇಡೀ ಊರಿಗೆ ಊರೇ ಬೆಚ್ಚಿ ಬಿದ್ದಿದೆ. ತಾಯಿ ಮಂಗಲಾ ನಾಯಕ್(45), ಪುತ್ರ ಪ್ರಜ್ವಲ್ ನಾಯಕ್(18) ಕೊಲೆಯಾದ ದುರ್ದೈವಿಗಳು.
ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ
ಎಂದಿನಂತೆ ನಿನ್ನೆ ರಾತ್ರಿ ತಾಯಿ ಮಂಗಲಾ, ಮಗ ಪ್ರಜ್ವಲ್ ಹಾಗೂ ಮಗಳು ಊಟ ಮಾಡಿ ಮಲಗಲು ಮುಂದಾಗಿದ್ದಾರೆ. ಈ ವೇಳೆ ಅದೊಬ್ಬ ಗೆಳೆಯನ ಜೊತೆಗೆ ಮನೆಗೆ ಎಂಟ್ರಿಯಾಗಿದ್ದಾನೆ. ಹೀಗೆ ಹೊರಗಿನಿಂದ ಒಳಗೆ ಬಂದವನೇ ಎದುರಿಗೆ ಬಂದ ಮಂಗಲಾ ಮೇಲೆ ರಾಡ್ನಿಂದ ಹಲ್ಲೆ ಮಾಡಲು ಶುರು ಮಾಡಿದ್ದಾನೆ. ಈ ವೇಳೆ ತಾಯಿ ಜೀವ ಉಳಿಸಲು ಬಂದ ಮಗನ ಮೇಲೆಯೂ ಅಮಾನುಷವಾಗಿ ಹಲ್ಲೆ ಮಾಡಿ, ರಾಡ್ನಿಂದಲೇ ಕೊಚ್ಚಿ ಕೊಂದೇ ಬಿಟ್ಟಿದ್ದಾನೆ.
ಸತ್ಯ ಬಾಯ್ಬಿಟ್ಟ ಆರೋಪಿ
ಇತ್ತ ಹೊತ್ತಿದ ಬೆಂಕಿಯಲ್ಲಿ ಬಟ್ಟೆಗಳನ್ನ ಸುಡ್ತಿರುವುದು ಹಾಗೂ ಆತನ ಚಪ್ಪಲಿ ಮೇಲೆ ರಕ್ತ ಬಿದ್ದಿರುವುದನ್ನ ಕಂಡ ಪೊಲೀಸರು ಕೂಡಲೇ ಆತನನ್ನ ಹಿಡಿದು ತಂದು ತೀವ್ರ ವಿಚಾರಣೆ ನಡೆಸಿ ಸತ್ಯ ಬಾಯಿ ಬಿಡಸ್ತಾರೆ. ಇನ್ನೊಂದು ಕಡೆ ರವಿ ಖಾನಾಪಗೋಳ ಮನೆ ಕೂಡ ಇದೇ ಊರಲ್ಲಿದ್ದ ಆತನ ಮನೆಗೆ ಮತ್ತೊಂದು ತಂಡ ಹೋಗಿ ನೋಡಿದಾಗ ಆತ ಮನೆಯಲ್ಲೇ ಇರೋದು ಗೊತ್ತಾಗಿ ಎಲ್ಲ ಕಡೆಯಿಂದ ಸುತ್ತುವರೆದು ಆತನನ್ನ ಹಿಡಿಯುವಲ್ಲಿ ಯಶಸ್ವಿಯಾಗ್ತಾರೆ.
ಆತನ ಮನೆ ತಪಾಸಣೆ ನಡೆಸಿದಾಗ ಅಲ್ಲಿ ಅಪ್ರಾಪ್ತ ಬಾಲಕಿ ಇದ್ದು ಆಕೆಯನ್ನ ರಕ್ಷಣೆ ಮಾಡಿಕೊಂಡು ಬರ್ತಾರೆ. ಠಾಣೆಗೆ ತಂದು ರವಿಯನ್ನ ವಿಚಾರಣೆ ನಡೆಸಿದಾಗ ಅಪ್ರಾಪ್ತಳ ಜೊತೆಗೆ ಮದುವೆಗೆ ಆಕೆಯ ತಾಯಿ ಒಪ್ಪಿರಲಿಲ್ಲ. ಅಂದಿನಿಂದ ಆಕೆಯ ಮೇಲೆ ಕೋಪವಿತ್ತು. ನಿನ್ನೆ ಹುಡುಗಿ ಜೊತೆಗೆ ಜಗಳ ಮಾಡಿಕೊಂಡಿದ್ದು ಆಕೆ ಪೋನ್ ಮಾಡಿ ಹೇಳ್ತಾಳೆ. ಈ ವೇಳೆ ಆಕೆಯನ್ನ ಕರೆದುಕೊಂಡು ಬರುತ್ತೇನೆ ಅಂತಾ ಹೇಳಿ ಆಕೆಯ ಬಳಿ ಹೋಗಿದ್ದು, ಅಡ್ಡ ಬಂದ ತಾಯಿ, ತಮ್ಮನನ್ನ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಆರೋಪಿ ರವಿ.