ಬೆಳಗಾವಿಯ 2ನೇ ಪಡೆ ಕೆ.ಎಸ್.ಆರ್.ಪಿ ಹಾಗೂ ಪಿಟಿಎಸ್ ಕಂಗ್ರಾಳಿ ಘಟಕದ ವಾರ್ಷಿಕ ಅಂತರ್ ದಳಗಳ ಕ್ರೀಡಾಕೂಟದ ಸಮಾರೋಪ ಸಮಾರಂಭ ಉತ್ಸಾಹದಲ್ಲಿ ನೆರವೇರಿತು.
ಮುಖ್ಯ ಅತಿಥಿಗಳಾಗಿ ಪೊಲೀಸ್ ವರಿಷ್ಠ ಅಧಿಕಾರಿ ಡಾ. ಭೀಮಾಶಂಕರ ಗುಳೇದ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಅವರು ಶುಭ ಕೋರಿದರು.
ಅತಿಥಿಗಳ ಭಾಷಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮೀಸಲು ಪೊಲೀಸ್ ಪಡೆಯ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಮಾಂಡೆಂಟ್ ರಮೇಶ್ ಬೊರಗಾವೆ ರವರು ಅಧ್ಯಕ್ಷತೆ ವಹಿಸಿದ್ದರು. ಪಿಟಿಎಸ್ ಕಂಗ್ರಾಳಿಯ ಪ್ರಾಂಶುಪಾಲರಾದ ಕೆ. ಎಂ. ಮಹಾದೇವಪ್ರಸಾದ್ ಉಪಸ್ಥಿತರಿದ್ದರು. ಎ ಸಿ
ಚನ್ನಬಸವ , ನಾಗೇಶ ಯಡಾಳ, ಆಶಿಷ್ ಮೇಘನ್ನವರ್ ಹಾಗೂ 2 ನೇಯ ಪಡೆ ಮತ್ತು ಪಿಟಿಎಸ್ ಕಂಗ್ರಾಳಿಯ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಿದ್ದರು.