ಪಂಚಮಸಾಲಿ2Aಮೀಸಲಾತಿ ಹೋರಾಟದಲ್ಲಿ ಬಿರುಕು ಶುರುವಾಯ್ತಾ ಎಂಬ ಪ್ರಶ್ನೆ ಮೂಡ ತೊಡಗಿದೆ. ಇಂದು ಬಾಗಲಕೋಟೆಯಲ್ಲಿ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೊರಗಿಟ್ಟು ಪಂಚಮಸಾಲಿ ಮಹಾಸಭಾ ಕಾರ್ಯಕಾರಿಣಿ ಸಭೆ ನಡೆಸಲಾಗಿದ್ದು,
ಪಂಚಮಸಾಲಿ ಸಮಾಜದ 2 ಎ ಮೀಸಲಾತಿ ಹೋರಾಟ ರಾಜಕೀಯ ಪ್ರೇರಿತವಾಗಿದೆ ಎನ್ನುವುದು ಸ್ಪಷ್ಟವಾಗಿ ಒಂದೇ ಪಕ್ಷದ ಪರವಾಗಿ ಹೋರಾಟ ಎನ್ನುವುದು ಪಂಚಮಸಾಲಿ ಸಮಾಜದ ನಾಯಕರೇ ಅಸಮಾಧಾನ ಹೊರಹಾಕುತ್ತಿದ್ದಾರೆ.
ಪಂಚಮಸಾಲಿ ಸಮಾಜದ ಕೇವಲ ಒಂದು ಪಕ್ಷದ ಮುಖವಾಣಿಯಾಗಿ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆ ಈಗ ಸ್ಪೋಟಕ ತಿರುವು ಪಡೆದುಕೊಂಡಿದೆ.