ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಇತರೆ ಸಮುದಾಯಗಳಿಗೆ ಮಾತ್ರ ಸ್ಪಂದನೆ ನೀಡುತ್ತಿದ್ದಾರೆ, ಆದರೆ ನಮ್ಮ ಸಮುದಾಯದ ವಿಚಾರ ಅಂತ ಬಂದಾಗ ಅವರ ಕಡೆಯಿಂದ ಸೂಕ್ತವಾದ ಸ್ಪಂದನೆ ಇರಲ್ಲ ಎಂದು ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿರುವ ಅವರು, ರಾಜ್ಯ ಸರ್ಕಾರ ನಮ್ಮ ಸುದೀರ್ಘವಾದ ಲಿಂಗಾಯತ ಪಂಚಮಸಾಲಿ ಸಮುದಾಯದ ಹೋರಾಟಕ್ಕೆ ಯಾವುದೇ ಕನಿಷ್ಠ ಸ್ಪಂದನೆ ನೀಡಿಲ್ಲ.
ಆದ್ರೆ ನಮ್ಮಸಿಎಂ ಬೇರೆ ಸಮುದಾಯಗಳಿಗೆ ಮಾತ್ರ ತಕ್ಷಣ ಸ್ಪಂದನೆ ನೀಡಿದ್ದಾರೆ. ಇದರಿಂದ ಸಮುದಾಯಕ್ಕೆ ಬೇಸರವಾಗಿದ್ದು,
ಬೆಳಗಾವಿ ಅಧಿವೇಶನದ ವೇಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೀರ್ಮಾನ ಮಾಡಲಾಗಿದೆ ಎಂದಿದ್ದಾರೆ.ಚಳಿಗಾಲದ ವಿಧಾನಸಭೆ ಅಧಿವೇಶನದ ವೇಳೆ ಸುಮಾರು 5 ಸಾವಿರ ಟ್ರಾಕ್ಟರ್‌ಗಳ ಮೂಲಕ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
Laxmi News 24×7