Breaking News

ಉದಯವಾಗಲಿ ಚಲುವ ಕನ್ನಡ ನಾಡು ಕರ್ನಾಟಕದ ಏಕೀಕರಣಕ್ಕೆ

Spread the love

ಬೆಳಗಾವಿ: ಉದಯವಾಗಲಿ ಚಲುವ ಕನ್ನಡ ನಾಡು ಕರ್ನಾಟಕದ ಏಕೀಕರಣಕ್ಕೆ ಮುನ್ನುಡಿ ಬರೆದರೆ ಡಾ ಡಿ ಎಸ್ ಕರ್ಕಿಯವರ ಹಚ್ಚೇವು ಕನ್ನಡದ ದೀಪ ಕವಿತೆ ಅದಕ್ಕೆ ಶಕ್ತಿ ತುಂಬಿ ಏಕೀಕರಣದ ಕೂಗು ಬಲಗೊಳ್ಳಲು ಕಾರಣವಾಯಿತು ಎಂದು ಗದುಗಿನ ಡಾ ತೋಂಟದ ಸಿದ್ದರಾಮ ಶ್ರೀಗಳು ನುಡಿದರು ಅವರು ಬೆಳಗಾವಿ ಯ ಡಾ ಡಿ ಎಸ್ ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನದ  2024ನೇ ಸಾಲಿನ ಕರ್ಕಿ ಕಾವ್ಯಶ್ರೀ  ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹೇಳಿದರು

ಬೆಳಗಾವಿಯಂತಹ ಮರಾಠಿಮಯ ನೆಲದಲ್ಲಿ ಕವಿ ಈ ಕವಿತೆ ರಚಿಸಿದ್ದನ್ನು ನಾವು ಗಮನಿಸಬೇಕು. ಡಾ ಡಿ ಎಸ್ ಕರ್ಕಿಯವರು ಕಟ್ಟಿಕೊಟ್ಟ ಈ ಕವಿತೆ ಎಲ್ಲೆಲ್ಲಿ ಕನ್ನಡಿಗರಿದ್ದಾರೊ ಅಲ್ಲೆಲ್ಲ ಮೊಳಗುತ್ತಲೆ ಇರುತ್ತದೆ ಅದು ಗಡಿನಾಡೆ ಇರಲಿ ನಡುನಾಡೆ ಇರಲಿ ದೇಶವೆ ಇರಲಿ ವಿದೇಶವೆ ಇರಲಿ ಅದು ಕನ್ನಡಿಗರ ಧೇಯಗೀತೆಯಾಗಿ ಕನ್ನಡಿಗರನ್ನು  ಕನ್ನಡಾಭಿಮಾನವನ್ನು ಜಾಗೃತಗೊಳಿಸುತ್ತಲೆ ಇರುತ್ತದೆ‌ ಇಂತಹ ಲೋಕಮಾನ್ಯ ಕವಿ ನಮ್ಮ ಬೆಳಗಾವಿಯವರು ಎಂಬುದು ನಮಗೆ ಹೆಮ್ಮೆಯ ವಿಷಯ ಕನ್ನಡ ಛಂದೋವಿಕಾಸ ದಂತಹ ಪ್ರಬುದ್ದ ಪ್ರಬಂಧ,ನಕ್ಷತ್ರ ಗಾನ,ಭಾವತೀರ್ಥ ಬಣ್ಣದ ಚಂಡು ದಂತಹ ಉತ್ಕೃಷ್ಟ ಸಾಹಿತ್ಯ ಕೊಟ್ಟ ಕವಿಗೆ ಸಿಗಬೇಕಾದ ಗೌರವ ಪುರಸ್ಕಾರಗಳು ಸಿಗದಿರಿವುದು ವಿಷಾದಕರ ಸಂಗತಿ


Spread the love

About Laxminews 24x7

Check Also

ಮೂಡಲಗಿ ವಲಯದ ಅತಿಥಿ ಶಿಕ್ಷಕರ ವೇತನ ವಿತರಿಸಿದ ಸರ್ವೋತ್ತಮ ಜಾರಕಿಹೊಳಿ*

Spread the love ಗೋಕಾಕ-* ಧಾರವಾಡ ವಲಯದಲ್ಲಿಯೇ ಮೂಡಲಗಿ ಶೈಕ್ಷಣಿಕ ವಲಯದ ಸಾಧನೆಯನ್ನು ಮೆಚ್ಚುವಂತಹದ್ದು, ಅದರಲ್ಲಿಯೂ ಅತಿಥಿ ಶಿಕ್ಷಕರನ್ನು ಇಟ್ಟುಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ