Breaking News

4ನೇ ಮರಾಠಿ ಬಾಲ ಸಾಹಿತ್ಯ ಸಮ್ಮೇಳನ ಇಂಟರ್ನೆಟ್ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲದರ ಜ್ಞಾನ ಇರುವುದು ಅವಶ್ಯಕವಾಗಿದೆ- ವಿಶ್ವಜೀತ್ ಹಸಬೆ

Spread the love

4ನೇ ಮರಾಠಿ ಬಾಲ ಸಾಹಿತ್ಯ ಸಮ್ಮೇಳನ

ಇಂಟರ್ನೆಟ್ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲದರ ಜ್ಞಾನ ಇರುವುದು ಅವಶ್ಯಕವಾಗಿದೆ- ವಿಶ್ವಜೀತ್ ಹಸಬೆ

ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಒಡನಾಟ ಚೆನ್ನಾಗಿದ್ದರೆ ಮಾತ್ರ ಜ್ಞಾನದ ವರ್ಧನೆ ಸಾಧ್ಯ. ಇಂದಿನ ಇಂಟರ್ನೆಟ್ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲದರ ಜ್ಞಾನ ಇರುವುದು ಅವಶ್ಯಕವಾಗಿದೆ ಎಂದು ವಿಶ್ವಜೀತ ಹಸಬೆ ಹೇಳಿದರು.

ಗುರುವರ್ಯ ವಿ.ಗೋ. ಸಾಠೇ ಮರಾಠಿ ಪ್ರಭೋದಿನಿಯ ವತಿಯಿಂದ ಆಯೋಜಿಸಿದ್ದ 24ನೇ ಮರಾಠಿ ಬಾಲ ಸಾಹಿತ್ಯ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಮ್ಮೇಳನವನ್ನ ಆರ್. ಎನ್. ಹರಗುಡೆ ಅವರು ಉದ್ಘಾಟಿಸಿದರು. ವೇದಿಕೆಯ ಮೇಲೆ ಪ್ರಬೋದಿನಿಯ ಅಧ್ಯಕ್ಷ ಜಯಂತ್ ನಾರ್ವೇಕರ್, ಸುಭಾಷ್ ಒವುಳಕರ್, ಪ್ರಸಾದ್ ಮೊಳೆರಾಖಿ, ಸ್ವರಾಲಿ ಬಿರ್ಜೆ, ಉಪಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಇನ್ನುಳಿದವರು ಆಸಿನರಾಗಿದ್ದರು.

ಇತ್ತೀಚಿಗೆ ವಿದ್ಯಾರ್ಥಿಗಳು ಕೇವಲ ಪಾಠ್ಯಕ್ರಮಕ್ಕೆ ಮಾತ್ರ ಸೀಮಿತರಾಗಿ ಅಭ್ಯಾಸ ಮಾಡುತ್ತಾರೆ. ಆದರೇ ಹೆಚ್ಚಿನ ಅಭ್ಯಾಸಕ್ಕೆ ಮುಂದಾಗಲ್ಲ. ಹೆಚ್ಚು ಹೆಚ್ಚು ಜ್ಞಾನ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ತಾವು ಕಥೆ ಕವನಗಳನ್ನು ರಚಿಸಿ ಶಿಕ್ಷಕರಿಗೆ ತೋರಿಸಿ ಅವರ ಗಮನ ಸೆಳೆಯಬೇಕು. ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಲು ಈ ಸಮ್ಮೇಳನವು ಒಳ್ಳೆಯ ವೇದಿಕೆಯನ್ನು ಕಲ್ಪಿಸಿ ಕೊಟ್ಟಿದೆ ಎಂದರು.

ಈ ವೇಳೆ ವಿವಿಧ ಗಣ್ಯರು ಮತ್ತು ಸಾಹಿತ್ಯಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.


Spread the love

About Laxminews 24x7

Check Also

ಕೆ.ಎಸ್.ಆರ್.ಟಿ.ಸಿ ವಿಭಾಗಮಟ್ಟದ ಕುಂದು ಕೊರತೆ ಸಭೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ

Spread the loveಕೆ.ಎಸ್.ಆರ್.ಟಿ.ಸಿ ವಿಭಾಗಮಟ್ಟದ ಕುಂದು ಕೊರತೆ ಸಭೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ ನಗರದಲ್ಲಿ ಮಾನ್ಯ ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ