ಬೆಳಗಾವಿ ಶಹಪುರದಲ್ಲಿರುವ ಶ್ರೀ ಕಾಳಭೈರವ ಮಂದಿರದಲ್ಲಿ ನಾಥ್ ಪಂಥಿಯ ರಾವುಳ ಸಮಾಜದ ವತಿಯಿಂದ ಶ್ರೀ ಕಾಳಭೈರವ ಜಯಂತಿಯನ್ನು ಆಚರಿಸಲಾಯಿತು.
ಬೆಳಗಾವಿ ಶಹಪುರದಲ್ಲಿರುವ ಶ್ರೀ ಕಾಳಭೈರವ ಮಂದಿರದಲ್ಲಿ
ಶ್ರೀ ಕಾಳ ಭೈರವ ಜಯಂತಿಯ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶುಕ್ರವಾರದಿಂದಲೇ ಅಭಿಷೇಕ್, ಪೂಜೆ, ಮಹಾಆರತಿ, ಮಹಾಪ್ರಸಾದ ವಿತರಣೆ ಇನ್ನುಳಿದ ಕಾರ್ಯಕ್ರಮಗಳು ನಡೆದವು.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಂದಿರ ವ್ಯವಸ್ಥಾಪನೆ ಸಮಿತಿಯ ಸಲಹೆಗಾರ ಶ್ರೀಕಾಂತ್ ಕಾಕತಿಕರ್ ಅವರು ನಾಥ್ ಪೈ ಸರ್ಕಲ್ ನಲ್ಲಿರುವ ಶ್ರೀ ಕಾಳಭೈರವ ಮಂದಿರ ಬೆಳಗಾವಿಯ ಅತ್ಯಂತ ಹಳೆಯ ಮಂದಿರವಾಗಿದೆ. ಇದನ್ನು ಶ್ರೀ ರಾವುಳ ಮಹಾರಾಜರು ಸ್ಥಾಪಿಸಿದ್ದಾರೆ ಎಂದರು.
ಇನ್ನು ಮಂದಿರದಲ್ಲಿ ಶ್ರೀ ಕಾಳಭೈರವ ಜಯಂತಿಯ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಂಜೆ ದೀಪೋತ್ಸವ ನಡೆಯಲಿದೆ ಎಂದು ಇನ್ನೊರ್ವ ಸದಸ್ಯರು ತಿಳಿಸಿದರು.