ದೇವನಹಳ್ಳಿ, ನವೆಂಬರ್ 23: ಆಕೆ ಎರಡು ವರ್ಷಗಳಿಂದಷ್ಟೇ ಪ್ರೀತಿಸಿದವನ ಜೊತೆ ಬಾಳಬೇಕು ಅಂತ ಮನೆಯವರನ್ನ ಒಪ್ಪಿಸಿ ಮದುಯಾಗಿದ್ದರು. ಜೊತೆಗೆ ಆರು ತಿಂಗಳಿಂದೆ ಗರ್ಭಿಣಿಯಾಗಿದ್ದು (pregnant), ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಅಷ್ಟರಲ್ಲೇ ಗಂಡನ ಮನೆಯವರು ನೀಡಿದ ಕಿರುಕುಳಕ್ಕೆ ಬೇಸತ್ತು ಸಾವಿನ ಮನೆ ಸೇರಿದ್ದು, ಮಗಳ ಚೊಚ್ಚಲ ಬಾಣಂತನದ ನಿರೀಕ್ಷೆಯಲ್ಲಿದ್ದ ಕುಟುಂಬಸ್ಥರಿಗೆ ಶಾಕ್ ನೀಡಿದ್ದಾಳೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಗುಮ್ಮನಹಳ್ಳಿ ನಿವಾಸಿ ಸುರೇಶ್ ಜೊತೆ ಕಳೆದ 2 ವರ್ಷದಿಂದಷ್ಟೆ ಹಸೆಮಣೆ ಏರಿದ್ದ ರೂಪ ಮೃತ ಗರ್ಭಿಣಿ. ಆರು ತಿಂಗಳ ಗರ್ಭಿಣಿಯಾಗಿದ್ದ ರೂಪ ಹೊಟ್ಟೆಯಲ್ಲಿನ ಮಗು ಕಣ್ಣು ತೆರೆಯುವ ಮುನ್ನವೆ ತಾಯಿ ಹೊಟ್ಟೆಯಲ್ಲಿನ ಮಗು ಸಮೇತ ಪರಲೋಕ ಸೇರಿದ್ದಾರೆ.
ಹೌದು. ಅಂದಹಾಗೆ ಕಳೆದ ಎರಡು ವರ್ಷಗಳ ಹಿಂದೆ ಪರಸ್ಪರ ಎರಡು ಮನೆಯವರನ್ನ ಒಪ್ಪಿಸಿ ಮದುವೆಯಾಗಿದ್ದ ರೂಪ ಮತ್ತು ಸುರೇಶ್ ಆರು ತಿಂಗಳವರೆಗೂ ಸುಖ ಸಂಸಾರ ಮಾಡಿದ್ದಾರೆ. ಆದರೆ ಆರು ತಿಂಗಳು ಕಳೆಯುತ್ತಿದ್ದಂತೆ ನನಗೆ ಸಾಲಗಾರರ ಕಾಟ ಜಾಸ್ತಿಯಾಗುತ್ತಿದೆ. ಮದುವೆಗೆ ಸಾಲ ಮಾಡಿದ್ದು, ಬೇರೆ ಹುಡುಗಿಯನ್ನ ಮದುವೆಯಾಗಿದ್ದರೆ ಹೆಚ್ಚಿನ ವರದಕ್ಷಿಣೆ ಸಿಗುತ್ತಿತ್ತು. ಸಾಲ ತೀರುತಿತ್ತು ಅಂತ ಗಂಡ ಮತ್ತು ಅತ್ತೆ-ಮಾವ ಕಿರುಕುಳ ನೀಡಲು ಆರಂಭಿಸಿದ್ರಂತೆ.