Breaking News

ರಾಜ್ಯದಲ್ಲಿ ಶ್ರೀಮಂತರ ‘BPL ಕಾರ್ಡ್’ಗಳು ಮಾತ್ರ ರದ್ದಾಗುತ್ತದೆ : DCM

Spread the love

ಬೆಂಗಳೂರು : ರಾಜ್ಯದಲ್ಲಿ ಶ್ರೀಮಂತರ ‘BPL ಕಾರ್ಡ್’ಗಳು ಮಾತ್ರ ರದ್ದಾಗುತ್ತದೆ, ಬಡವರ ಕಾರ್ಡ್ ರದ್ದಾಗಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ BPL ಕಾರ್ಡ್ಗಳು ರದ್ದಾಗುತ್ತವೆ ಎನ್ನುವ ಆತಂಕ ಯಾರಿಗೂ ಬೇಡ.

ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಮರು ಪರಿಶೀಲನೆ ಮಾಡುತ್ತಿದ್ದೇವೆ. ನೀವು ಅರ್ಹರೇ ಆಗಿದ್ದರೆ ಖಂಡಿತವಾಗಿಯೂ ನಿಮಗೆ BPL ಸೌಲಭ್ಯಗಳು ಸಿಗಲಿವೆ. ಒಂದು ವೇಳೆ ಅರ್ಹರಾಗಿದ್ದರೂ ರದ್ದಾಗಿದ್ದರೆ ಮತ್ತೆ ಅರ್ಜಿ ಸಲ್ಲಿಸಿ ಪಡೆಯಬಹುದು. ಸರ್ಕಾರಿ ನೌಕರರು, ಹತ್ತಾರು ಎಕರೆ ಜಮೀನು ಹೊಂದಿರುವವರು, ಸಹಕಾರ ಸಂಘಗಳ ಖಾಯಂ ಸರ್ಕಾರಿ ನೌಕರರು ಬಿಪಿಎಲ್ ಸೌಲಭ್ಯ ಪಡೆದಿರುವುದು ತಿಳಿದುಬಂದಿದೆ.

ಈ ಸಂಬಂಧ ನಾವು ಶಾಸಕರಿಗೆ ಮಾಹಿತಿ ನೀಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಸಮಿತಿ ಅವರಿಗೂ ಕೂಡ ನೀಡಿದ್ದೇವೆ. ಯಾರಿಗೆ ಅನ್ಯಾಯವಾಗಿದೆ ಅವರ ಮನೆ ಬಾಗಿಲಿಗೆ ಹೋಗಿ ಆಗಿರುವ ತೊಂದರೆಯನ್ನು ಅವರು ಸರಿಪಡಿಸುತ್ತಾರೆ. ನಮ್ಮ ಸರ್ಕಾರ ಇರುವುದೇ ಬಡವರಿಗಾಗಿ. ಖಂಡಿತವಾಗಿಯೂ ಅರ್ಹರಿಗೆ ಸೌಲಭ್ಯ ಕೊಟ್ಟೇಕೊಡುತ್ತೇವೆ ಎಂದರು.


Spread the love

About Laxminews 24x7

Check Also

ಎಂಎಲ್ಎ ಕಾರು ಡ್ರೈವರ್ ಅಪಘಾತದಲ್ಲಿ ಸಾವು; ಶಾಸಕ ಮಹೇಶ ಟೆಂಗಿನಕಾಯಿ ಕಣ್ಣೀರು

Spread the love ಎಂಎಲ್ಎ ಕಾರು ಡ್ರೈವರ್ ಅಪಘಾತದಲ್ಲಿ ಸಾವು; ಶಾಸಕ ಮಹೇಶ ಟೆಂಗಿನಕಾಯಿ ಕಣ್ಣೀರು ಹುಬ್ಬಳ್ಳಿ: ಮಗಳು ಹುಟ್ಟುಹಬ್ಬಕ್ಕೆಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ