ಕುಮಾರಸ್ವಾಮಿಯವರನ್ನು ಕರಿಯ ಎಂದು ಕರೆದ ಜಮೀರ್ ಅಹ್ಮದ್…
ಜಮೀರ್ ಹೇಳಿದ್ದು ಸರಿಯಲ್ಲ. ಕಪ್ಪು ಬಿಳುಪು ಅಂತ ಕರೆಯೋದು ಸರಿಯಲ್ಲ- ಡಿಸಿಎಂ ಡಿ.ಕೆ. ಶಿವಕುಮಾರ್
ಕುಮಾರಸ್ವಾಮಿಯವರನ್ನು ಕರಿಯ ಎಂದು ಕರೆದ ಜಮೀರ್ ಅಹ್ಮದ್…
ಜಮೀರ್ ಹೇಳಿದ್ದು ಸರಿಯಲ್ಲ.
ಕಪ್ಪು ಬಿಳುಪು ಅಂತ ಕರೆಯೋದು ಸರಿಯಲ್ಲ
ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ
ಚನ್ನಪಟ್ಟಣ ಉಪಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರನ್ನು ಕರಿಯ ಎಂದು ಕರೆದಿರುವ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖಂಡಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಆ ಹೇಳಿಕೆಯನ್ನ ಒಪ್ಪುವುದಿಲ್ಲ, ಅದನ್ನ ನಾನು ಖಂಡಿಸ್ತೇನೆ. ಜಮೀರ್,ಅವರು ಏನುಬೇಕಾದ್ರೂ ಕರೆದುಕೊಳ್ಳಲಿ, ಕರಿಯ ಅಂತಾದ್ರೂ ಅನ್ನಲಿ,ಕೊಚ್ಚೆ ಅಂತಾದ್ರೂ ಕರೆಯಲಿ… ಆದರೆ ನಾನು ಪಕ್ಷದ ಅಧ್ಯಕ್ಷನಾಗಿ ಆನ್ ರೆಕಾರ್ಡ್ ಹೇಳ್ತೇನೆ ಜಮೀರ್ ಹೇಳಿದ್ದು ಸರಿಯಲ್ಲ. ಕಪ್ಪು ಬಿಳುಪು ಅಂತ ಕರೆಯೋದು ಸರಿಯಲ್ಲ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ನೀಡಿದ್ದಾರೆ ಎಂಬುದನ್ನು ಯತ್ನಾಳ ಹೇಳಿಕೆ ಆಧರಿಸಿಯೇ ಸಿಎಂ ಹೇಳಿದ್ದಾರೆ. ಒಂದು ಸಾವಿರ ಕೋಟಿ ಸಂಗ್ರಹಿಸಿರುವ ಬಗ್ಗೆ ಯತ್ನಾಳ ಹೇಳಿದ್ದಾರೆ. ಈ ಹಿಂದೇ ಖರೀದಿಸಿದ್ದ ಶಾಸಕರೆಲ್ಲ ಕುರಿಗಳಾ? ಒಂದು ಸಾವಿರ ಕೋಟಿ ಸಂಗ್ರಹದ ಕುರಿತು ಯತ್ನಾಳ ಹೇಳಿಕೆಯೇ ಸಾಕ್ಷಿ. ಯತ್ನಾಳೇ ಇದಕ್ಕೆ ಸಾಕ್ಷಿ ಕೊಡಬೇಕು. ಯತ್ನಾಳ ಏನು ದಡ್ಡಾನಾ? ಎಂದು ಪ್ರಶ್ನಿಸಿದರು.