ಈ ಹಿಂದೆ ಮುಸಲ್ಮಾನರ ವೋಟು ಬೇಡ, ನಾನು ಅವರ ಬಳಿ ಮತ ಕೇಳೋಕೆ ಹೋಗಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು ಎನ್ನಲಾದ ವಿಡಿಯೋವನ್ನು ಪ್ಲೇ ಮಾಡಿ ಜನರಿಗೆ ಕೇಳಿಸಿದ ಸಚಿವ ಜಮೀರ್, ಹೆಚ್ಡಿಕೆಗೆ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಮತ ನೀಡಬೇಡಿ ಎಂದು ಮನವಿ ಮಾಡಿದ್ರು.
ಕುಮಾರಸ್ವಾಮಿ ವಿರುದ್ಧ ಜಮೀರ್ ಕಿಡಿ
ಚನ್ನಪಟ್ಟಣದಲ್ಲಿ ಮತಯಾಚನೆ ವೇಳೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಸಿ ಪಿ ಯೋಗೇಶ್ವರ್ ನಮ್ಮ ಪಾರ್ಟಿಯಿಂದ ರಾಜಕೀಯ ಪ್ರಾರಂಭ ಮಾಡಿದ್ರು, ಕೆಲವು ವ್ಯತ್ಯಾಸಗಳಾಗಿ ಬಿಜೆಪಿ ಹೋದ್ರು ಜೆಡಿಎಸ್ ಹೋಗಬೇಕು ಅಂತಿದ್ರೂ ಆದ್ರೆ ಕುಮಾರಸ್ವಾಮಿ, ಬಿಜೆಪಿಗಿಂತ ಡೇಂಜರ್ ಅಂತ ಜೆಡಿಎಸ್ಗೆ ಹೋಗಿಲ್ಲ ಎಂದು ಹೇಳಿದ್ರು. ಇದೇ ವೇಳೆ ಈ ಹಿಂದೆ ಮುಸಲ್ಮಾನರ ವೋಟು ಬೇಡ, ನಾನು ಅವರ ಬಳಿ ಮತ ಕೇಳೋಕೆ ಹೋಗಲ್ಲ. ಹಿಜಾಬ್ ಬಗ್ಗೆ ಮಾತನಾಡಲ್ಲ ಎಂದೆಲ್ಲ ಕುಮಾರಸ್ವಾಮಿ ಹೇಳಿದ್ದಾರೆ ಎನ್ನಲಾದ ಹಳೇ ವಿಡಿಯೋಗಳನ್ನು ಪ್ಲೇ ಮಾಡಿ ಜನರಿಗೆ ಕೇಳಿಸುವ ಮೂಲಕ ನಿಖಿಲ್ ಕುಮಾರಸ್ವಾಮಿಗೆ ಮತ ನೀಡಬೇಡಿ ಎಂದು ಹೇಳಿದ್ರು.
ಏಕವಚನದಲ್ಲೇ ನಾಲಗೆ ಹರಿಬಿಟ್ಟ ಸಚಿವರು!
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ನಾಲಗೆ ಹರಿಬಿಟ್ಟ ಸಚಿವರು, ‘ಹಿಂದೆ ಹಿಜಾಬ್ ಬೇಡೆ ಪಜಾಬ್ ಬೇಡ ಅಂದಿದ್ದೀಯಾ, ಈಗ ನಿನಗೆ ಮುಸಲ್ಮಾನರ ಓಟ್ ಬೇಕಾ? ಏ ಕುಮಾರಸ್ವಾಮಿ ನಿನ್ನ ರೇಟ್ ಹೇಳು, ಮುಸಲ್ಮಾನರು ಒಂದೊಂದು ಪೈಸೆ ಹಾಕಿ ಇಡೀ ನಿನ್ನ ಕುಟುಂಬವನ್ನೇ ಖರೀದಿ ಮಾಡುತ್ತಾರೆ. ಈ ಕುಮಾರಸ್ವಾಮಿ ಬಿಜೆಪಿ ಹೋಗಿ ಮುಸಲ್ಮಾನರನ್ನು ಖರೀದಿ ಮಾಡ್ತಾನಂತೆ. ಏ ಕುಮಾರಸ್ವಾಮಿ ನಿನ್ ರೇಟು ಹೇಳು, ಮುಸಲ್ಮಾನರಿಂದ ಚಂದಾ ಎತ್ತಿ ಇಡೀ ನಿನ್ನ ಕುಟುಂ ಖರೀದಿ ಮಾಡ್ತೇನೆ ಎಂದು ಹೆಚ್ಡಿಕೆಗೆ ಸವಾಲು ಹಾಕಿದ್ರು’. ಅಲ್ಲದೆ ಕುಮಾರಸ್ವಾಮಿ ಅವರ ಬಣ್ಣದ ಕುರಿತೂ ಮಾತನಾಡಿ ಜನಾಗೀಯವಾಗಿ ನಿಂಧಿಸಿದ್ದಾರೆ.
ಜಮೀರ್ ವಿರುದ್ಧ ಜೆಡಿಎಸ್ ಆಕ್ರೋಶ!
ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ಬಗ್ಗೆ ಜೆಡಿಎಸ್ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ. ಸಚಿವರು ‘ಜನಾಂಗೀಯ ನಿಂದನೆ ಮಾಡಿ ವರ್ಣಭೇದ ತಾರತಮ್ಯ ಎಸಗಿದ್ದಾರೆ. ಅಷ್ಟೆ ಅಲ್ಲದೇ ಒಂದು ಸಮುದಾಯವನ್ನು ಎತ್ತಿಕಟ್ಟಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡಲು ಜನರನ್ನು ಪ್ರಜೋದಿಸಿರುವ ಜಮೀರ್ ಅಹ್ಮದ್ ಬಾಯಿಂದ ಬಂದಿರುವ ಈ ಜನಾಂಗೀಯ ದ್ವೇಷದ ಮಾತುಗಳು ಅಕ್ಷಮ್ಯ, ಅಪರಾಧ. ಈ ಕೂಡಲೇ ರಾಮನಗರ ಜಿಲ್ಲಾ ಪೊಲೀಸರು ಜನಾಂಗೀಯ ನಿಂದನೆ, ವರ್ಣಭೇದ ಹಾಗೂ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿರುವ ಸಚಿವ ಜಮೀರ್ ಅಹ್ಮದ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಜಾತ್ಯತೀತ ಜನತಾದಳ ಪಕ್ಷವು ಆಗ್ರಹಿಸುತ್ತದೆ’ ಎಂದು ತನ್ನ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ. (
Laxmi News 24×7