ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾದ ಮತ್ತೊಂದು ಹಗರಣ ಬಯಲಾಗಿದೆ. ಅಧಿಕಾರಿಗಳೇ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪ್ರಾಧಿಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ವಂಚನೆ ಪ್ರಕರಣದಲ್ಲಿ ಪ್ರಾಧಿಕಾರದ ಹೊರಗುತ್ತಿಗೆ ನೌಕರರು, ಅಧಿಕರಿಗಳು, ಬ್ಯಾಂಕ್ ಸಿಬ್ಬಂದಿಗಳು ಶಾಮೀಲಾಗಿದ್ದಾರೆ ಎಂದು ಮೈಸೂರು ಉಳಿಸಿ ಹೋರಾಟಗಾರರ ವೇದಿಕೆ ಆರೋಪಿಸಿದೆ.
ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಶಾಖೆಯ ಕೆಲ ಸಿಬ್ಬಂದಿಗಳು ಹಾಗೂ ಕೆಲ ಅಧಿಕಾರಿಗಳು ಮುಡಾ ಕಂದಾಯ ಇಲಾಖೆಯ ವಿವಿಧ ಸೇವೆಗಳಿಗಾಗಿ 93 ಗ್ರಾಹಕರಿಂದ ಹಣ ಪಡೆದು, ಪ್ರಾಧಿಕಾರದ ಖಾತೆಗೆ ಜಮೆ ಮಾಡಿಲ್ಲ. ಪ್ರಾಧಿಕಾರದ ಖಾತೆಗೆ ಹಣ ಜಮೆ ಆಗಿರುವ ರೀತಿಯಲ್ಲಿ ಸುಳ್ಳು ಬ್ಯಾಂಕ್ ಚಲನ್ ಗಳನ್ನು ಸೃಷ್ಟಿಸಿ ಪ್ರಾಧಿಕಾರಕ್ಕೆ ಕೋಟ್ಯಂತರ ಹಣ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
93 ಜನರು ಹಣ ನೀಡಿರುವ ಬಗ್ಗೆ ಚಲನ್ ನಮ್ಮ ಬಳಿ ಇದೆ. ಆದರೆ ಆದರೆ ಹಣ ನಮ್ಮ ಖಾತೆಗೆ ಜಮೆ ಆಗಿಲ್ಲ ಹೀಗಾಗಿ ಕೂಡಲೇ ನಮ್ಮ ಖಾತೆಗೆ ಹಣ ಜಮೆ ಮಡಿ ಎಂದು ಮುಡಾ ಹಣಕಾಸು ವಿಭಾಗ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ಪತ್ರ ಬರೆದಿದೆ.