Breaking News

ಚಿತ್ರೀಕರಣಕ್ಕಾಗಿ ಮರಗಳ ಮಾರಣಹೋಮ: ಕೇಸ್ ದಾಖಲಿಸಲು ‘ಸಚಿವ ಈಶ್ವರ್ ಖಂಡ್ರೆ’ ಸೂಚನೆ

Spread the love

ಬೆಂಗಳೂರು: ನಗರದ ಪೀಣ್ಯ ಬಳಿಯ ಹೆಚ್ ಎಂ ಟಿಯ ಅರಣ್ಯ ಭೂಮಿಯಲ್ಲಿ ಸ್ಯಾಂಡಲ್ ವುಡ್ ನ TAXIC ಚಿತ್ರದ ಚಿತ್ರೀಕರಣಕ್ಕಾಗಿ ಮರಗಳ ಮಾರಣಹೋಮ ಮಾಡಲಾಗಿದೆ. ಹೀಗೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.

 

ಇಂದು ಈ ಸಂಬಂಧ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು,ಬೆಂಗಳೂರು ಪೀಣ್ಯ ಪ್ಲಾಂಟೇಷನ್ 1 ಮತ್ತು 2ರಲ್ಲಿ ಒಟ್ಟು 599 ಎಕರೆ ಮೀಸಲು ಅರಣ್ಯ ಎಂದು ಗೆಜೆಟ್ ಅಧಿಸೂಚನೆ ಆಗಿದ್ದು, ಇದನ್ನು 1960ರ ದಶಕದಲ್ಲಿ ಡಿನೋಟಿಫಿಕೇಷನ್ ಮಾಡದೆ ಕಾನೂನು ಬಾಹಿರವಾಗಿ ಎಚ್.ಎಂ.ಟಿ. ಸಂಸ್ಥೆಗೆ ದಾನ, ಮಂಜೂರು ಹೆಸರಲ್ಲಿ ಹಸ್ತಾಂತರಿಸಲಾಗಿರುತ್ತದೆ. ಸುಪ್ರೀಂಕೋರ್ಟ್ ‘Once a forest is always a forest unless de-notified’ ಎಂದು ಹೇಳಿದ್ದು, ಡಿ ನೋಟಿಫಿಕೇಷನ್ ಆಗದ ಎಚ್.ಎಂ.ಟಿ. ವಶದಲ್ಲಿರುವ ಭೂಮಿ ಅರಣ್ಯವೇ ಆಗಿರುತ್ತದ. ಜೊತೆಗೆ ತನ್ನ ಸ್ವಾಧೀನದಲ್ಲಿರುವ ಅರಣ್ಯ ಭೂಮಿಯನ್ನು ಎಚ್.ಎಂ.ಟಿ. ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡಿದ್ದು, ಇಲ್ಲಿ ಅರಣ್ಯತರ ಚಟುವಟಿಕೆ ನಡೆಯುತ್ತಿರುತ್ತದೆ. ಈ ಅರಣ್ಯ ಪ್ರದೇಶದಲ್ಲಿ ಮರ ಗಿಡಗಳನ್ನು ಕಡಿದಿರುವುದು ಉಪಗ್ರಹ ಚಿತ್ರದಿಂದ ಗೋಚರಿಸುತ್ತಿದೆ ಎಂದಿದ್ದಾರೆ.


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ