ಚಿತ್ರದುರ್ಗ: ಯುವಕನೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನ ತಂದೆಯನ್ನೇ ಕೊಲೆ ಮಾಡಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕುಂದಲಗುರ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಮಗನಿಂದಲೇ ಹತ್ಯೆಯಾದ ತಂದೆಯನ್ನು ರಂಗಸ್ವಾಮಿ(50) ಎಂದು ಗುರುತಿಸಲಾಗಿದ್ದು, ಆರೋಪಿ ಪುತ್ರ ದೇವರಾಜ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮನೆಯಲ್ಲಿ ರಾತ್ರಿ ಊಟದ ವೇಳೆ ತನಗೆ ಮೊಟ್ಟೆ ಕೊಡಲಿಲ್ಲ ಎಂದು ದೇವರಾಜ್ ತಂದೆ ಜತೆ ಜಗಳ ಆರಂಭಿಸಿದ್ದ. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿದ್ದು, ತೀವ್ರ ಆಕ್ರೋಶಗೊಂಡ ದೇವರಾಜ್, ಎಲ್ಲಾ ವಿಚಾರದಲ್ಲೂ ನನ್ನನ್ನು ಕಡೆಗಣಿಸುತ್ತಿದ್ದೀಯಾ, ಮದುವೆಯನ್ನೂ ಮಾಡಿಸುತ್ತಿಲ್ಲ ಎಂದು ತಂದೆ ಮೇಲೆ ಹಲ್ಲೆ ನಡೆಸಿದ್ದಾನೆ.