ಮಳೆ ನೀರನ್ನು ಆಕಾಶಕ್ಕೆ ಕಳಿಸೋಕಾಗಲ್ಲ, ಇದೆಲ್ಲಾ ಕಾಮನ್ ಎಂದ ಪರಂ!
ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಉಂಟಾದ ಹವಾಮಾನ ವೈಪರಿತ್ಯದಿಂದ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗಿದ್ದು, ಅದರಲ್ಲು ಬೆಂಗಳೂರಿನಲ್ಲಿ ಮಹಾಮಳೆಗೆ ಜನಜೀವನ ಅಕ್ಷರಶಃ ನಲುಗಿ ಹೋಗಿದೆ. ಈ ನಡುವೆ ಈ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ವ್ಯಂಗ್ಯವಾಗಿ ಮಾತನಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿದೆ, ಮಳೆ ಬಂದಾಗ ನೀರನ್ನು ವಾಪಸ್ ಆಕಾಶಕ್ಕೆ ಕಳಿಸೋಕೆ ಆಗುತ್ತಾ. ಭೂಮಿ ಮೇಲೆ ಹರಿದು ಹೋಗಬೇಕು ಅಲ್ವಾ ಅದನ್ನು ಎನು ಮಾಡೋಕೆ ಆಗುತ್ತೆ ಎಂದರು.
ಅಕ್ಟೋಬರ್ ನಲ್ಲಿ ಮಳೆ ಬರುತ್ತಿದೆ ಎಂದರೆ ಎಂತಹ ಸಿಟಿ ಕೂಡ ಅಸ್ತವ್ಯಸ್ತವಾಗುತ್ತೆ, ಯಾಕೆ ನ್ಯೂಯಾರ್ಕ್ ನಲ್ಲಿ ಆಗಲ್ವಾ..? ಲಂಡನ್ ನಲ್ಲಿ ಈ ರೀತಿ ಆಗಲ್ವಾ. ಬೆಂಗಳೂರಿನಲ್ಲಿ ಅನಿರೀಕ್ಷಿತವಾಗಿ ಮಳೆ ಬಂದಿರೋದು ನಮಗೂ ಆಶ್ಚರ್ಯವಾಗುತ್ತೆ. ಹಾಗಂತ ಎನು ಮಾಡೋಕೆ ಆಗುತ್ತೆ ಎಂದು ಹೇಳಿದರು.
ಪ್ರತಿ ಬಾರಿ ಮಳೆ ಬಂದಾಗ ಈ ರೀತಿ ಆಗುತ್ತಾ ಇರುತ್ತೆ. ಇದನ್ನೆಲ್ಲ ಮ್ಯಾನೇಜ್ ಮಾಡುತ್ತಾ ಹೋಗಬೇಕು ಅಷ್ಟೇ, ಅದನ್ನ ಬಿಟ್ಟು ನೀರನ್ನು ವಾಪಸ್ ಆಕಾಶಕ್ಕೆ ಕಲಿಸೋಕೆ ಆಗುತ್ತಾ ಎಂದು ಪರಮೇಶ್ವರ್ ವ್ಯಂಗ್ಯವಾಗಿ ಹೇಳಿದರು.