Breaking News

ಇನ್ಮುಂದೆ 7 ದಿನಗಳಲ್ಲೇ ಸಿಗಲಿದೆ ಜನನ-ಮರಣ ಪ್ರಮಾಣಪತ್ರ!

Spread the love

ಬೆಂಗಳೂರು : ಆಸ್ಪತ್ರೆಯಲ್ಲಿ ಮತ್ತು ನಂತರದ ಜನನ ಪ್ರಮಾಣ ಪತ್ರವನ್ನು ವಿತರಿಸುವಾಗ ಇ- ಜನ್ಮ ತಂತ್ರಾಂಶದ ಸಕಾಲ ಮಿತಿಯನ್ನು 15 ರಿಂದ 7 ದಿನಗಳಿಗೆ ಕಡಿಮೆ ಮಾಡುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಆಸ್ಪತ್ರೆಯಲ್ಲಿ ಮತ್ತು ನಂತರದ ಜನನ ಪ್ರಮಾಣ ಪತ್ರದ ವಿತರಣೆಯ ಕುರಿತು ಉಲ್ಲೇಖ (1) ರಂತೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ರ 4ನೇ ವರದಿಯ ಶಿಫಾರಸ್ಸು ಸಂಖ್ಯೆ 131 ಕ್ಕೆ ಸಂಬಂಧಿಸಿದಂತೆ ಜನನ ಪತ್ರವನ್ನು ನೀಡುವಾಗ ಅಧಿಕಾರಿಗಳು ಯಾವುದೇ ತಪ್ಪುಗಳನ್ನು ಮಾಡಬಾರದು ಅದನ್ನು ಸರಿಪಡಿಸುವುದು ಕಷ್ಟ.

 

ತುರ್ತು ಸಂದರ್ಭದಲ್ಲಿ ಜನನ ಪ್ರಮಾಣ ಪತ್ರವನ್ನು ಒಂದು ದಿನದೊಳಗೆ ಒದಗಿಸುವುದು. ಅರ್ಜಿದಾರರು ಒದಗಿಸಿದ ದಾಖಲೆಗಳನ್ನು ಸುರಕ್ಷಿತ ಕಸ್ಟಡಿಯಲ್ಲಿ ಇಡಬೇಕು ಮತ್ತು ಅವರು ಮತ್ತೆ ದಾಖಲೆಗಳನ್ನು ಸಲ್ಲಿಸುವಂತೆ ಕೇಳಬಾರದು.

ಅರ್ಜಿಯ ಪ್ರಕ್ರಿಯೆಯ ಹಂತದಲ್ಲಿ ಅರ್ಜಿದಾರರಿಗೆ ಎಸ್. ಎಮ್. ಎಸ್. ಕಳುಹಿಸಲು ಮತ್ತು ಸೇವೆಯನ್ನು ಅನುಮೋದಿಸಿದಾಗ ಆನ್‌ಲೈನ್ ಮೂಲಕ ಪ್ರಮಾಣ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವ ಆಯ್ಕೆಯನ್ನು ಹೊಂದಿರಬೇಕೆಂದು ಸಲಹೆ ನೀಡಿದರು.

ಶಿಫಾರಸ್ಸು ಎರಡು ಸೇವೆಗಳಿಗೆ ಸಕಾಲದ ಸಮಯದ ಮಿತಿಯನ್ನು 15 ದಿನಗಳಿಂದ 07 ದಿನಗಳವರೆಗೆ ಕಡಿಮೆ ಮಾಡಬಹುದು ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ಶಿಫಾರಸ್ಸು ಮಾಡಿದೆ.


Spread the love

About Laxminews 24x7

Check Also

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

Spread the love ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ