Breaking News

ಸಾರಿಗೆ ಬಸ್ ಬೈಕ್ ಮಧ್ಯೆ ಅಪಘಾತ. ಸ್ಥಳದಲ್ಲಿಯೇ ಬೈಕ್ ಸವಾರ ಸಾವು

Spread the love

ಬೈಲಹೊಂಗಲ: ತಾಲೂಕಿನ ಹಳೇ ಜಾಲಿಕೊಪ್ಪ ಗ್ರಾಮದ ಮಲಪ್ರಭಾ ನದಿ ಸಮೀಪ ಬಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.

ತುರಮರಿ ಗ್ರಾಮದ ರಾಮನಿಂಗ ಫಕೀರಪ್ಪ ಶಿಂಗಾಡಿ (40) ಮೃತ ವ್ಯಕ್ತಿ.

ಬೈಕ್ ಸವಾರ ಬೈಲಹೊಂಗಲದಿಂದ ತುರಮರಿ ಗ್ರಾಮಕ್ಕೆ ಬರುತ್ತಿದ್ದ ವೇಳೆ ಬೆಳಗಾವಿ ಘಟಕಕ್ಕೆ ಸೇರಿದ ಸಾರಿಗೆ ಬಸ್ ಯಲ್ಲಮ್ಮನಗುಡ್ಡದಿಂದ ಬೈಲಹೊಂಗಲ ಕಡೆ ಬರುವಾಗ ಮಲಪ್ರಭಾ ನದಿ ಬಳಿ ಈ ದುರ್ಘಟನೆ ಸಂಭವಿಸಿದೆ.

 

ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಬಸ್ ಮುಂಭಾಗದಲ್ಲಿ ಸಿಲುಕಿತ್ತು.

ಸ್ಥಳಕ್ಕೆ ಡಿವೈ ಎಸ್ ಪಿ ರವಿ ನಾಯ್ಕ, ಸಿಪಿಐ ಪಂಚಾಕ್ಷರಿ ಸಾಲಿಮಠ, ಪಿಎಸ್ ಐಎಫ್ ವೈ ಮಲ್ಲೂರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಮಾಜ ಸೇವಕ ಮಲ್ಲಿಕಾರ್ಜುನ ಗಾಣಿಗೇರ ಹಾಗೂ ಸಾರ್ವಜನಿಕರು ಶವ ಸಾಗಿಸುವಲ್ಲಿ ನೇರವಾಗಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.

ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ನಡೆದ “72ನೇ ಸಹಕಾರ ಸಪ್ತಾಹ” ಆಚರಣೆಯ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, ಸಭೆ ಬಳಿಕ ಪತ್ರಿಕಾಗೋಷ್ಠಿ

Spread the loveಇಂದು ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ನಡೆದ “72ನೇ ಸಹಕಾರ ಸಪ್ತಾಹ” ಆಚರಣೆಯ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ