Breaking News

ರೋಲ್‌ಕಾಲ್ ಸ್ವಾಮಿ-ಸೂಟ್‌ಕೇಸ್ ಸ್ವಾಮಿ’ ಎಚ್‌ಡಿಕೆಗೆ ಚಾಯ್ಸ್‌ ಕೊಟ್ಟ ಕಾಂಗ್ರೆಸ್‌

Spread the love

ನ್ನಪಟ್ಟಣ ಉಪಚುನಾವಣೆಗೆ 50 ಕೋಟಿ ರೂಪಾಯಿ ಕೊಡುವಂತೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಬೆದರಿಕೆ ಹಾಕಿದ್ದಾರೆ ಎಂದು ಉದ್ಯಮಿ ವಿಜಯ್‌ ತಾತಾ ದೂರು ನೀಡಿದ್ದಾರೆ. ಈ ಸಂಬಂಧ ಎಫ್‌ಐಆರ್‌ ಕೂಡ ದಾಖಲಾಗಿದ್ದು, ಕಾಂಗ್ರೆಸ್‌ ಈ ವಿಚಾರವಾಗಿ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದೆ.

 

ಈ ಬಗ್ಗ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ‘ರೋಲ್ಕಾಲ್swamy ಅವರ ದಾಹಗಳಿಗೆ ಮಿತಿ ಇಲ್ಲ. ಅಧಿಕಾರ ದಾಹ, ಭೂ ದಾಹ, ಹಣ ದಾಹಗಳಿಗೆ ಹಲವು ನಿದರ್ಶನಗಳಿವೆ. ಗಂಗೇನಹಳ್ಳಿಯ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಭೂದಾಹ ಬಯಲಾಗಿದ್ದರೆ, ಗಣಿ ಹಗರಣ ಹಾಗೂ ₹50 ಕೋಟಿ ರೋಲ್ಕಾಲ್ ಹಗರಣದಿಂದ ಹಣದಾಹ ಹೊರಬಂದಿದೆ’ ಎಂದು ಕುಟುಕಿದೆ.

‘ಸಿದ್ಧಾಂತದ ಜೊತೆಗೆ ನಾಲಿಗೆಯನ್ನೂ ಕಾಲಕ್ಕೆ ತಕ್ಕಂತೆ ತಿರುಗಿಸುವ ರೋಲ್ಕಾಲ್ ಸ್ವಾಮಿಯವರ ಅಧಿಕಾರ ದಾಹ ಎಂತದ್ದು ಎಂಬುದನ್ನು ರಾಜ್ಯದ ಜನ ನೋಡಿದ್ದಾರೆ. ಸೂಟ್ಕೇಸ್ ಸ್ವಾಮಿಗಳು ಕರ್ನಾಟಕದ ರಾಜಕಾರಣದಲ್ಲಿ ಬೃಹನ್ನಳೆ ಪಾತ್ರವಹಿಸಿರುವುದು ದುರಂತ’ ಎಂದು ಲೇವಡಿ ಕೂಡ ಮಾಡಿದೆ.


Spread the love

About Laxminews 24x7

Check Also

ಆರೋಗ್ಯ ಮತ್ತು ಫಿಟ್ನೆಸ್ ಕಡೆ ಗಮನ ಹರಿಸಿದರೆ ಜೀವನದಲ್ಲಿ ಸದಾಕಾಲ ಸಂತೋಷದಿಂದ ಇರಬಹುದು ಎಂದು ಮೈಸೂರಿನಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೇಳಿದರು.

Spread the loveಮೈಸೂರು: ಜೀವನದಲ್ಲಿ ಸಂಪಾದನೆ ಮುಖ್ಯ. ಅದರೆ ಜೊತೆಯಲ್ಲಿ ನೆಮ್ಮದಿಯಾಗಿರಲು ಆರೋಗ್ಯವನ್ನೂ ಸಂಪಾದಿಸಬೇಕು ಎಂದು ಬಾಲಿವುಡ್ ನಟಿ ಶಿಲ್ಪ ಶೆಟ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ