Breaking News

ಮೈಸೂರು ದಸರಾದಲ್ಲೂ ಧರ್ಮ ದಂಗಲ್: ಗುಂಬಜ್ ಮಾದರಿಯ ದೀಪಾಲಂಕಾರಕ್ಕೆ ಅಪಸ್ವರ

Spread the love

ಮೈಸೂರು, : ವಿಶ್ವವಿಖ್ಯಾತ ದಸರಾ(Dasara)ಬಂದರೆ ಸಾಕು ಮೈಸೂರಿನಲ್ಲಿ‌ ಒಂದಿಲ್ಲೊಂದು ವಿಚಾರಗಳು ಹುಟ್ಟಿಕೊಳ್ಳುತ್ತವೆ. ಇತ್ತೀಚೆಗಷ್ಟೇ ಮಹಿಷಾ ದಸರಾ ಸಂಘರ್ಷವಾಗಿತ್ತು. ಅದು ಮುಗಿಯಿತು ಎನ್ನುವಷ್ಟರಲ್ಲಿ ಇದೀಗ ಧರ್ಮ ದಂಗಲ್​ ಶುರುವಾಗಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಗುಂಬಜ್ ಮಾದರಿ ದೀಪಾಲಂಕಾರದ ಬಗ್ಗೆ ಮಾಜಿ ಸಂಸದ ಪ್ರತಾಪ್​ ಸಿಂಹ ಅಪಸ್ವರ ಎತ್ತಿದ್ದಾರೆ.

ಮೈಸೂರು ದಸರಾದಲ್ಲೂ ಧರ್ಮ ದಂಗಲ್: ಗುಂಬಜ್ ಮಾದರಿಯ ದೀಪಾಲಂಕಾರಕ್ಕೆ ಅಪಸ್ವರಮೈಸೂರು ದಸರಾದಲ್ಲೂ ಧರ್ಮ ದಂಗಲ್: ಗುಂಬಜ್ ಮಾದರಿಯ ದೀಪಾಲಂಕಾರಕ್ಕೆ ಅಪಸ್ವರ

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರತಾಪ್​ ಸಿಂಹ, ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಅಳವಡಿಸಿರುವ ಹಸಿರು ಚಪ್ಪರದ ದೀಪಾಲಂಕಾರದ ಭಾವಚಿತ್ರ ಹಾಕಿ ಬದಲಾಯಿಸಲು ಹೇಳಿದ್ದೇನೆ ಎಂದು ಹೇಳಿದ್ದಾರೆ.

ಪ್ರತಾಪ್​ ಸಿಂಹ ಟ್ವೀಟ್​

 

 

 

ಪ್ರತಿ ವರ್ಷ ಸಯ್ಯಾಜಿರಾವ್ ರಸ್ತೆಯಲ್ಲಿ ಚೆಸ್ಕಾಂನಿಂದ ಹಸಿರು ಚಪ್ಪರ ಅಳವಡಿಸಲಾಗುತ್ತದೆ. ನಾಳೆ ಸಂಜೆ ಸಚಿವ ಕೆ ಜೆ ಜಾರ್ಜ್‌ ಅವರು ಇಲ್ಲಿಂದಲೇ‌ ದೀಪಾಲಂಕಾರ ಉದ್ಘಾಟನೆ ಮಾಡಲಿದ್ದಾರೆ.ಇನ್ನು ಇತ್ತೀಚೆಗೆ ಮಹಿಷಾ ದಸರಾ ಆಚರಣೆಯಲ್ಲಿ ಮಾಜಿ ಸಂಸದ ಪ್ರತಾಪ್‌ ಸಿಂಹ ಸೇರಿದಂತೆ ಬಿಜೆಪಿ ನಾಯಕರು ವಿರೋಧಿಸಿದ್ದ ಕಾರಣಕ್ಕೆ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗೇ ಮೈಸೂರಿನ ಟೌನ್‌ಹಾಲ್‌ ಹೊರತುಪಡಿಸಿ ಉಳಿದೆಡೆ 144 ಸೆಕ್ಷನ್‌ ಜಾರಿಗೊಳಿಸಲಾಗಿತ್ತು.


Spread the love

About Laxminews 24x7

Check Also

ಸಿಎಂ ಬದಲಾವಣೆ ಚರ್ಚೆ: ಹೈಕಮಾಂಡ್​​ ನಿರ್ಧಾರ ಅಂತಿಮ:ಡಾ.ಜಿ.ಪರಮೇಶ್ವರ್

Spread the love ಬೆಂಗಳೂರು: “ಸಿಎಂ ಬದಲಾವಣೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್​​ ನಿರ್ಧಾರವೇ ಅಂತಿಮ. ಸಂದರ್ಭ ಬಂದಾಗ ಅವರು ಸಿಎಲ್​ಪಿ ಸಭೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ