ಬೆಂಗಳೂರು: ಬಿಗ್ ಬಾಸ್(Bigg Boss Kannada-11) ಆರಂಭಗೊಂಡು ಒಂದು ದಿನ ಕಳೆದಿದೆ. ಆದರೆ ಈ ಒಂದು ದಿನದಲ್ಲಿ ಸ್ಪರ್ಧಿಗಳು ಅನೇಕ ಸಲಿ ಕಿತ್ತಾಡಿಕೊಂಡಿದ್ದಾರೆ.
ಈ ಬಾರಿ ಸ್ವರ್ಗ ಹಾಗೂ ನರಕ ಎಂಬ ಎರಡು ಮನೆಗಳಿವೆ. ನರಕದಲ್ಲಿನ 7 ಮಂದಿ, ಸ್ವರ್ಗದಲ್ಲಿನ 10 ಮಂದಿ ತಂಡದಂತೆ ಇದ್ದಾರೆ.
ಆದರೆ ಈ ತಂಡಗಳ ಒಳಗೆಯೇ ಹೊಂದಾಣಿಕೆಯಿಲ್ಲದೆ ಮಾತಿಗೆ ಮಾತು ಬೆಳೆಯುತ್ತಿದೆ.
ಮೊದಲ ದಿನ ಯಮುನಾ, ಜಗದೀಶ್ ಹಾಗೂ ಚೈತ್ರಾ ಕುಂದಾಪುರ ಅವರ ಧ್ವನಿಯೇ ಹೆಚ್ಚಾಗಿ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದೆ. ಉಳಿದ ಸ್ಪರ್ಧಿಗಳ ನಡುವೆಯೋ ಸಣ್ಣ ಸಣ್ಣ ಕಾರಣಕ್ಕೆ ಮಾತಿಗೆ ಮಾತು ಬೆಳೆದಿದೆ.