Breaking News

ಸಿದ್ದರಾಮಯ್ಯ ಜೊತೆ ಉಂಡು ತಿಂದವರೇ ಬೆನ್ನಿಗೆ ಚೂರಿ ಹಾಕಿದ್ರು : ಸಿಎಂ ಬಾಲ್ಯ ಸ್ನೇಹಿತ ಕರಿಯಪ್ಪ ಹೇಳಿಕೆ

Spread the love

ಮೈಸೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಮುಡಾಗೆ 14 ನಿವೇಶನಗಳನ್ನ ಹಿಂತಿರುಗಿಸಿದ್ದು, ಈ ಒಂದು ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಬಾಲ್ಯ ಸ್ನೇಹಿತ ಕರಿಯಪ್ಪ ಮಾತನಾಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬಾರದು ಎಂದು ಸಿದ್ದರಾಮಯ್ಯ ಬಾಲ್ಯ ಸ್ನೇಹಿತ ಕರಿಯಪ್ಪ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ ಎಲ್ಲಾ ಭಾಗ್ಯಗಳನ್ನು ಕೊಟ್ಟವರು.

40 ವರ್ಷದಿಂದ ಯಾವುದೇ ಕಳಂಕ ಇರಲಿಲ್ಲ. ಸೈಟ್ ವಿಚಾರ ನಮಗೆ ಸಾಕಷ್ಟು ಬೇಸರವಾಗಿತ್ತು.

ಜೊತೆಯಲ್ಲಿ ಉಂಡು ತಿಂದವರೇ ಸಿಎಂ ಸಿದ್ದರಾಮಯ್ಯ ಇಂದಿನ ಪರಿಸ್ಥಿತಿಗೆ ಕಾರಣರಾಗಿದ್ದಾರೆ. ಅಲ್ಲದೆ ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬಾರದು. ಯಾವುದೇ ಕಾರಣಕ್ಕೂ ಸಿಎಂ ಪತ್ನಿ ನಿವೇಶನಗಳನ್ನು ಹಿಂತಿರುಗಿಸಬಾರದಾಗಿತ್ತು ಎಂದು ಅವರು ತಿಳಿಸಿದರು.

ಮರಿಗೌಡ ನಮ್ಮ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಆತನಿಂದಲೇ ಇಷ್ಟೆಲ್ಲಾ ಆಗಿರುವುದು ವಿಶ್ವನಾಥ ಮಾತನ್ನು ಸಿಎಂ ಕೇಳಿದ್ದರೆ ಈ ಆರೋಪ ಬರುತ್ತಿರಲಿಲ್ಲ ಆದರೆ ಈಗ ಸೈಟ್ ವಾಪಸ್ ಕೊಡಲೇಬಾರದು ಅನಿಸುತ್ತದೆ ಎಂದು ಸಿದ್ದರಾಮಯ್ಯ ಬಾಲ್ಯ ಸ್ನೇಹಿತ ಕರಿಯಪ್ಪ ತಿಳಿಸಿದರು.


Spread the love

About Laxminews 24x7

Check Also

ಕಾಂಗ್ರೆಸ್ ಸರ್ಕಾರ ಇಲ್ಲಿ ಲೂಟಿ ಮಾಡಿ ಬಿಹಾರ ಚುನಾವಣೆಗೆ ಹಣ ಕಳಿಸುತ್ತಿದ್ದಾರೆ : ಮಾಜಿ ಸಿಎಂ ಜಗದೀಶ್ ಶೆಟ್ಟರ್

Spread the love ಕಾಂಗ್ರೆಸ್ ಸರ್ಕಾರ ಇಲ್ಲಿ ಲೂಟಿ ಮಾಡಿ ಬಿಹಾರ ಚುನಾವಣೆಗೆ ಹಣ ಕಳಿಸುತ್ತಿದ್ದಾರೆ : ಮಾಜಿ ಸಿಎಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ