Breaking News

ಹೊಟೇಲ್‌ನಲ್ಲಿ ಯುವಕನಿಗೆ ಚಾಕು ಇ*ರಿದ ಬಿಎಸ್‌ಎಫ್ ಯೋಧ ಅರೆಸ್ಟ್

Spread the love

ಬೆಳಗಾವಿ: ನಗರದ ಹೊಟೇಲ್‌ನಲ್ಲಿ ಬಿಲ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರ ನಡುವಿನ ಗಲಾಟೆಯಲ್ಲಿ ಬಿಎಸ್‌ಎಫ್ ಯೋಧನೋರ್ವ ಯುವಕನಿಗೆ ಚಾಕು ಇರಿದ ಘಟನೆ ನಗರದ ಎಪಿಎಂಸಿ ರಸ್ತೆಯ ಆಯಿ ಹೊಟೇಲ್‌ನಲ್ಲಿ ಸೋಮವಾರ(ಸೆ30) ನಡೆದಿದೆ.

ಬಿಎಸ್‌ಎಫ್ ಯೋಧ ರುಕ್ಮಿಣಿ ನಗರದ ಪರುಶರಾಮ ರಾಮಗೊಂಡನವರ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಗ್ಯಾಂಗ್‌ವಾಡಿಯ ಅಲ್ತಾಫ್ ಚೌಗಲಾ ಎಂಬ ಯುವಕ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ.

ಆಯಿ ಹೊಟೇಲ್‌ನಲ್ಲಿ ಊಟಕ್ಕೆಬಂದಿದ್ದ ನಾಲ್ವರು ಗ್ಯಾಂಗ್‌ವಾಡಿಯ ಯುವಕರು ಹೊಟೇಲ್ ಮಾಲೀಕನೊಂದಿಗೆ ಜಗಳವಾಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದೆ. ಬಹಳ ಹೊತ್ತಿನವರೆಗೆ ಜಗಳ ನಡೆದಿದೆ. ಅಲ್ಲಿಯೇ ಪಕ್ಕದಲ್ಲಿ ಈತ ಊಟ ಮಾಡುತ್ತಿದ್ದನು. ಆಗ ಗ್ಯಾಂಗ್‌ವಾಡಿ ಹುಡುಗರೊಂದಿಗೆ ಜಗಳ ಮಾಡಿದಾಗ ಆಗ ಇವರ ಮಧ್ಯೆ ಮಾತಿನ ಚಕಮಕಿ ಜೋರಾಗಿದೆ. ಈ ವೇಳೆ ಈತನನ್ನು ನಿಂದಿಸಿದ್ದಕ್ಕೆ ತನ್ನ ಬಳಿ ಇದ್ದ ಚಾಕುವಿನಿಂದ ಅಲ್ತಾಫ್‌ನಿಗೆ ಚುಚ್ಚಿದ್ದಾನೆ. ರಕ್ತಸ್ರಾವದಿಂದ ಕೆಳಗೆ ಬಿದ್ದ ಅಲ್ತಾಫನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತ ಯೋಧ ಪರುಶರಾಮ ನಾಗಾಲ್ಯಾಂಡ್‌ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 15 ದಿನಗಳ ಕಾಲ ರಜೆಗೆಂದು ಬೆಳಗಾವಿಗೆ ಬಂದಿದ್ದನು. ಎರಡು ವರ್ಷದ ಹಿಂದೆಯೂ ಬೆಳಗಾವಿಷಯ ಬಾರ್‌ನಲ್ಲಿ ಯೋಧ ಜಗಳವಾಡಿದ್ದನು. ಈಗ ಚಾಕು ಇರಿತ ಪ್ರಕರಣದಲ್ಲಿ ಜೈಲುಪಾಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಫಿನಾಯಿಲ್ ಮಾರಾಟ ಮಾಡುತ್ತ ಚಿನ್ನದಂಗಡಿ ದೋಚಿದ್ದ ರಾಜಸ್ಥಾನಿ ಗ್ಯಾಂಗ್

Spread the loveಬೆಂಗಳೂರು : ಫಿನಾಯಿಲ್ ಸರಬರಾಜು ಮಾಡುತ್ತ ಚಿನ್ನದಂಗಡಿ ದೋಚಿದ್ದ ಐವರು ಆರೋಪಿಗಳನ್ನ ಕೆ. ಆರ್. ಪುರಂ ಠಾಣೆ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ