ಹುಬ್ಬಳ್ಳಿ: ಮುಡಾ ಪ್ರಕರಣದಲ್ಲಿ ಹೈ ಕೋರ್ಟ್ ಆದೇಶ ಬಂದ ನಂತರ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಸೂಕ್ತ. ಕೂಡಲೇ ಅವರು ವಿಧಾನಸಭೆ ವಿಸರ್ಜನೆ ಮಾಡಲಿ ಎಂದು ಬಿಜೆಪಿ ಮುಖಂಡ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಗ್ರಹಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದರೆ ತನಿಖೆ ಮೇಲೆ ಪ್ರಭಾವ ಖಚಿತ.
ಈ ಹಿಂದೆ ವಿಪಕ್ಷದಲ್ಲಿದ್ದಾಗ ಅವರು ಏನು ಮಾತನಾಡಿದ್ದರೂ ನೆನಪಿಸಿಕೊಳ್ಳಲಿ. ಮುಖ್ಯಮಂತ್ರಿ ಹುದ್ದೆಯಲ್ಲಿದ್ದು ಯಾವುದೇ ತನಿಖೆ ಎದುರಿಸುವುದು ಸರಿಯಲ್ಲ. ಅವರು ಹೈಕೋರ್ಟ್‌ನ ಆದೇಶ ಪಾಲಿಸಬೇಕು. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಕೊನೆಯ ಮುಖ್ಯಮಂತ್ರಿ. ಅವರ ನಂತರ ಯಾರೂ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಆಗಲ್ಲ. ಗೋರಿಗೆ ಹೋಗುವವರೂ ಸೇರಿದಂತೆ ಬಹಳ ಮಂದಿ ಸಹ ಪಾಳೆ ಹಚ್ಚಿದ್ದಾರೆ ಎಂದರು.
Laxmi News 24×7