Breaking News

ಲೈಂಗಿಕ ದೌರ್ಜನ್ಯ, ಯತ್ನಾಳ್ ವಿರುದ್ದ ಅವಹೇಳನಕ್ಕೆ‌ ಖಂಡನೆ; ಮನವಿ ಸಲ್ಲಿಕೆ

Spread the love

ಮುಧೋಳ: ನಗರದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ನಡೆದ ಪ್ರತಿಭಟನೆಯನ್ನು ಖಂಡಿಸಿ ಹಿಂದೂ ಪರ‌ ಸಂಘಟನೆ ಕಾರ್ಯಕರ್ತರು ಸೆ.24ರ ಮಂಗಳವಾರ ಪ್ರತಿಭಟನೆ ನಡೆಸಿ ಡಿವೈಎಸ್ಪಿ ಶಾಂತವೀರ ಅವರಿಗೆ ಮನವಿ ಸಲ್ಲಿಸಿದರು.

 

ಜಡಗಣ್ಣ ಬಾಲಣ್ಣ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ನಗರದ ಶಿವಾಜಿ ವೃತ್ತಕ್ಕೆ ಬಂದು ಸಭೆಯಾಗಿ ಮಾರ್ಪಟ್ಟಿತು.

ಈ ವೇಳೆ ಮಾತನಾಡಿದ ಹಿಂದೂ ಸಂಘಟನೆ ಮುಖಂಡ ಹನಮಂತ ಮಳಲಿ, ದೇಶದಲ್ಲಿನ ಮುಸ್ಲಿಮರು ಹಿಂದೂಗಳೊಂದಿಗೆ ನ್ಯಾಯಯುತವಾಗಿ ಹೊಂದಾಣಿಕೆ ಮಾಡಿಕೊಂಡರೆ ನಿಮಗೆ ದೇಶದಲ್ಲಿ ಭವಿಷ್ಯವಿದೆ. ಒಂದು ವೇಳೆ ಹೊಂದಾಣಿಕೆ ಜೀವನ ಸಾಗಿಸದೆ ಹೋದರೆ ಮುಂದಿನ ದಿನ ನಿಮಗೆ ಕೆಟ್ಟ ದಿನಗಳಾಗಲಿವೆ ಎಂದು ಎಚ್ಚರಿಕೆ ನೀಡಿದರು.

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮುಸ್ಲಿಮರು ಮುಧೋಳ ನಗರದ ಮಸೀದಿಗೆ ಬಂದು ಹೋಗುತ್ತಾರೆ. ಪೊಲೀಸ್ ಇಲಾಖೆ ಅವರನ್ನು ಹಿಡಿಯುವ ಕೆಲಸ ಮಾಡದೆ, ನಮ್ಮ ಜನಪ್ರತಿನಿಧಿ ಯತ್ನಾಳ್ ಮುಧೋಳಕ್ಕೆ ಆಗಮಿಸಿದರೆ ಅವರಿಗೆ ತೊಂದರೆ ನೀಡುತ್ತೀರಿ ಎಂದು ಇಲಾಖೆ‌ ನಡೆಗೆ ಬೇಸರ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಸಂತ ಜನಾಬಾಯಿ ಮಂದಿರ ಹಾಗೂ ಶ್ರೀ ಗೋಪಾಲಕೃಷ್ಣ ಮಂದಿರಕ್ಕೆ ಕುಟುಂಬ ಸಮೇತ ಭೇಟಿ

Spread the loveಪಂಢರಪುರದ ಗೋಪಾಲಪುರದಲ್ಲಿರುವ ಸಂತ ಜನಾಬಾಯಿ ಮಂದಿರ ಹಾಗೂ ಶ್ರೀ ಗೋಪಾಲಕೃಷ್ಣ ಮಂದಿರಕ್ಕೆ ಕುಟುಂಬ ಸಮೇತ ಭೇಟಿ ನೀಡಿ,ವಿಶೇಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ