ಬೆಂಗಳೂರು,ಸೆ.21- ವಿಶ್ವದಲ್ಲೇ ಕಂಡಿರದಂತಹ ಸಂಚನ್ನು ಆರ್‌ಆರ್ ನಗರ ಕ್ಷೇತ್ರದ ಶಾಸಕ ಮುನಿರತ್ನ ಸ್ವಪಕ್ಷ ಹಾಗೂ ವಿರೋಧಪಕ್ಷದ ವಿರುದ್ಧ ನಡೆಸಿದ್ದಾರೆ. ಬಿಜೆಪಿ, ಜೆಡಿಎಸ್ ನಾಯಕರು ಸತ್ಯಾಸತ್ಯತೆ ತಿಳಿದು ಮಾತನಾಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಯಾರ್ಯಾರು ಸಿಕ್ಕಿಕೊಂಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಿಲ್ಲ. ಎಲ್ಲವನ್ನೂ ಪರಿಶೀಲಿಸಿದ ಬಳಿಕ ಮಾತನಾಡುವುದು ಒಳ್ಳೆಯದು ಎಂದರು.
ಮುನಿರತ್ನ ಪ್ರಕರಣದಲ್ಲಿ ಎಸ್‌ಐಟಿ ರಚನೆ ಮಾಡಬೇಕೆಂಬುದು ನಮ ಪಕ್ಷದ ಶಾಸಕರು, ಸಚಿವರು, ಕೆಲ ಮುಖಂಡರು ಮನವಿ ಮಾಡಿರುವ ಬಗ್ಗೆ ಹೆಚ್ಚಿನ ಚರ್ಚೆಯಾಗಿಲ್ಲ. ಆದರೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ವಿರುದ್ಧ ನಡೆದಿರುವ ಷಡ್ಯಂತ್ರದ ಬಗ್ಗೆ ಕೇಳಿ ದಿಗ್ಭ್ರಮೆಯಾಯಿತು. ದೇಶದಲ್ಲಷ್ಟೇ ಅಲ್ಲ ವಿಶ್ವದಲ್ಲೇ ಈ ರೀತಿಯ ಸಂಚನ್ನು ನಾನು ನೋಡಿಲ್ಲ ಎಂದು ಹೇಳಿದರು.
ಸಿ.ಟಿ.ರವಿಯಣ್ಣ, ಅಶೋಕಣ್ಣ, ವಿಜಯೇಂದ್ರಣ್ಣ, ಕುಮಾರಣ್ಣ ಅವರು ಸತ್ಯಾಸತ್ಯತೆಯನ್ನು ಪರಿಶೀಲಿಸಿ ಮಾತನಾಡಬೇಕು. ತಮ ಅಭಿಪ್ರಾಯಗಳನ್ನು ಮುಕ್ತವಾಗಿ ತಿಳಿಸಿದರು.ಮುನಿರತ್ನ ಪ್ರಕರಣದಲ್ಲಿ ಜೆಡಿಎಸ್, ಬಿಜೆಪಿ ಮುಖಂಡರು ಉತ್ತರ ಕೊಡಬೇಕು, ನಾವುಗಳಲ್ಲ ಎಂದರು.
Laxmi News 24×7