ಬೆಂಗಳೂರು, ಸೆಪ್ಟೆಂಬರ್ 20: ಜಾತಿ ನಿಂದನೆ ಆರೋಪದಡಿ ಜೈಲು ಸೇರಿದ್ದ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣವು ದಾಖಲಾಗಿದೆ. ಸಂತ್ರಸ್ತೆ ನೀಡಿರುವ ದೂರಿನಲ್ಲಿ ಭಯಾನಕ ಅಂಶ ಬೆಚ್ಚಿಬೀಳಿಸುವಂತಿದೆ. ಸಂತ್ರಸ್ತೆಯನ್ನು ಮುಂದಿಟ್ಟುಕೊಂಡು ಮುನಿರತ್ನ ಹನಿಟ್ರ್ಯಾಪ್ ಮಾಡಿಸುತ್ತಿದ್ದನಂತೆ.
ತನಗೆ ಆಗದವರನ್ನು ಮಟ್ಟ ಹಾಕಲು ಹನಿಟ್ರ್ಯಾಪ್ ಮಾಡಿ ಅವರಿಗೆ ಏಡ್ಸ್ ಸೋಂಕಿತರ ರಕ್ತ ಇಂಜೆಕ್ಟ್ ಮಾಡಿಸುತ್ತಿದ್ದ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಮುನಿರತ್ನನ ಈ ಭಯಾನಕ ಕೃತ್ಯಕ್ಕೆ ಹಲವರು ಬಲಿಯಾಗಿದ್ದಾರೆ. ತನ್ನ ಎದುರಾಳಿಗಳನ್ನ ಮಟ್ಟ ಹಾಕಲು ಈ ತಂತ್ರಗರಿಕೆಯನ್ನ ನಡೆಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹನಿಟ್ರ್ಯಾಪ್, ಏಡ್ಸ್ ಹರಡಿಸುವ ಕೃತ್ಯ, ಡ್ರಗ್ಸ್ ದಂಧೆ ಬಗ್ಗೆಯೂ ಎಫ್‌ಐಆರ್‌ನಲ್ಲಿದೆ.
ಎಫ್‌ಐಆರ್‌ನಲ್ಲಿ ಏನಿದೆ?
ನಾನು (ಸಂತ್ರಸ್ತೆ) ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುತ್ತೇನೆ. ಕೋವಿಡ್ ಸಂದರ್ಭದಲ್ಲಿ ನಮ್ಮ ಏರಿಯಾದ ಕಾರ್ಪೋರೇಟರ್ ನನಗೆ ಪರಿಚಯವಿದ್ದು, ಕೋವಿಡ್‌ನಿಂದ ಬಳಲುತ್ತಿರುವ ಜನರಿಗಾಗಿ ಮಾಸ್ ವಿತರಣೆ ಮಾಡಲು 5,000 ಕ್ಕೂ ಹೆಚ್ಚು ಮಾಸ್ಕ್‌ಗಳನ್ನುಕಾರ್ಪೋರೇಟರ್‌ರಿಗೆ ನೀಡಿದ್ದೆ. ಇದನ್ನು ತಿಳಿದ ಶಾಸಕ ಮುನಿರತ್ನಂ ನಾಯ್ದು ನನಗೆ ವಾಟ್ಸ್ ಆಪ್ ಮುಖಾಂತರ ಕರೆ ಮಾಡಿ ನಮಸ್ತೆ ಲೀಡರ್ ನಾನು ಈ ಭಾಗದ ಶಾಸಕ ನಮ್ಮ ಕ್ಷೇತ್ರದಲ್ಲಿ, ನೀವು ಮಾಸ್ಕ್ ವಿತರಣೆ ಮಾಡುತ್ತೀರಿ, ನಿಮ್ಮ ಬಗ್ಗೆ ಕೇಳಿದ್ದೀನಿ ನನ್ನನ್ನು ಭೇಟಿ ಮಾಡಿ ಎಂದು ತಿಳಿಸಿರುತ್ತಾರೆ.