Breaking News

ಮುನಿರತ್ನಂ ವಿರುದ್ಧ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಲು ಒಕ್ಕಲಿಗರ ಆಗ್ರಹ

Spread the love

ದೊಡ್ಡಬಳ್ಳಾಪುರ: ಒಕ್ಕಲಿಗ ಸಮುದಾಯದ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಶಾಸಕ ಮುನಿರತ್ನಂ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಯುವ ಒಕ್ಕಲಿಗ ಗೆಳೆಯರ ಬಳಗ ಮತ್ತು ಕೆಂಪೇಗೌಡರ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದಿಂದ ನಗರದ ತಾಲ್ಲೂಕು ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಲಾಯಿತು.

 

ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಒಕ್ಕಲಿಗ ಜನಾಂಗದ ಗುತ್ತಿಗೆದಾರರೊಬ್ಬರನ್ನು ಶಾಸಕ ಮುನಿರತ್ನಂ ನಾಯ್ಡು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ತುಚ್ಛವಾಗಿ ಮಾತನಾಡಿ ಗುತ್ತಿಗೆದಾರರನ್ನು ಹೆದರಿಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಪ್ರತಿಭಟನನಿರತರು ದೂರಿದರು.

ಬೆದರಿಕೆಯ ಬಗ್ಗೆ ಆಡಿಯೊ ಧ್ವನಿ ಮುದ್ರಣ ಸಾಮಾಜಿಕ ಜಾಲತಾಣದಲ್ಲಿ ಮತ್ತು ಟಿ.ವಿ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಒಬ್ಬ ಜವಾಬ್ದಾರಿಯುತ ಪ್ರತಿನಿಧಿಯಾದ ಶಾಸಕರು ಆಡಿರುವ ಮಾತುಗಳು ಮತ್ತು ನಿಂದಿಸಿರುವ ಶಬ್ದಗಳನ್ನು ಕೇಳಿದರೆ ಶಾಸಕ ಸ್ಥಾನಕ್ಕೆ ಅರ್ಹನಾಗಲು ಸಾಧ್ಯವಿಲ್ಲ. ರಾಜ್ಯಪಾಲರು ಮುನಿರತ್ನಂ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಒತ್ತಾಯಿಸಿದರು.


Spread the love

About Laxminews 24x7

Check Also

ರಾಜ್ಯೋತ್ಸವ ಮೆರವಣಿಗೆ ವೇಳೆ ಪೊಲೀಸರಿಂದ‌ ಲಾಠಿ ಏಟು.

Spread the love ರಾಜ್ಯೋತ್ಸವ ಮೆರವಣಿಗೆ ವೇಳೆ ಪೊಲೀಸರಿಂದ‌ ಲಾಠಿ ಏಟು. ತಲೆ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದು ಬಿಮ್ಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ