ರಾಜ್ಯ ಸರ್ಕಾರ ದಿವಾಳಿಯಾಗಿದೆ: ಪ್ರಹ್ಲಾದ ಜೋಶಿ
ಹುಬ್ಬಳ್ಳಿ: ರೈತರ ಹೆಸರು ಹೇಳಿ ಹಾಲಿನ ದರ ಹಚ್ಚಳಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ, ಇದೊಂದು ದಿವಾಳಿ ಸರ್ಕಾರವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Prahlada Joshi) ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ರೈತರಿಗೆ ಹಾಲು ಉತ್ಪಾದನೆ ಪ್ರೋತ್ಸಾಹ ಧನ ಸ್ಥಗಿತಗೊಳಿಸಿತು.
ಇದೀಗ ರೈತರ ಹೆಸರಲ್ಲಿ ದರ ಹಚ್ಚಿಸಿ ಗ್ರಾಹಕರಿಗೆ ಬರೆ ಎಳೆಯಲು ಮುಂದಾಗಿದೆ. ದರ ಹೆಚ್ಚಳದ ಹಣ ಎರಡು ತಿಂಗಳ ನಂತರ ರೈತರಿಗೆ ತಲುಪುವುದೇ ಇಲ್ಲ. ರಾಜ್ಯದಲ್ಲಿ ಆಡಳಿತ ಕುಸಿದು ಬಿದ್ದಿದೆ. ಕೆಎಂಎಫ್ (KMF) ಸಹ ಅದೇ ರೀತಿ ಆಗಲಿದೆ ಎಂದರು.
ಕಾರ್ಮಿಕ ಇಲಾಖೆಯಲ್ಲಿ ಲ್ಯಾಪ್ ಟಾಪ್ ಕಳ್ಳತನ ಪ್ರಕರಣದ ಬಗ್ಗೆ ಮಾತನಾಡಿ, ಅವರೇ ಭಾಗಿಯಾಗುತ್ತಾರೆ, ಅವರೇ ದೂರು ನೀಡುತ್ತಾರೆ ಎಂದು ಟೀಕಿಸಿದರು.
ನಾಗಮಂಗಲ ಘಟನೆಯಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಿದವರನ್ನೇ ಎ-1 ಆರೋಪಿ ಎಂದು ಮಾಡಿರುವುದು ನೋಡಿದರೆ ಮಂಡ್ಯ ಎಸ್ಪಿಗೆ ಏನಾದರು ಮಾನ ಮರ್ಯಾದೆ ಇದೆಯಾ ಪ್ರಶ್ನಿಸಿದರು.