ನವದೆಹಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ಸಿಗುತ್ತಿದ್ದಂತೆ ಎಎಪಿ ಕಚೇರಿ ಎದುರು ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.
ಪಕ್ಷದ ಪ್ರಧಾನ ಕಚೇರಿ ಎದುರು ಜಮಾಯಿಸಿದ ಎಎಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ, ನರ್ತಿಸಿ ಸಂಭ್ರಮಿಸಿದ್ದಾರೆ.

ಮುಖ್ಯಮಂತ್ರಿಗಳ ನಿವಾಸದ ಎದುರು ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಸಿಹಿ ಹಂಚಿದ್ದಾರೆ. ಜತೆಗೆ ಕಾರ್ಯಕರ್ತರು ಕೂಗುತ್ತಿದ್ದ ‘ಬಂದರು, ಬಂದರು ಕೇಜ್ರಿವಾಲ್ ಬಂದರು. ಜೈಲಿನ ಕಂಬಿಗಳು ಮುರಿದವು, ಕೇಜ್ರಿವಾಲ್ ಬಿಡುಗಡೆಗೊಂಡರು’ ಎನ್ನುವ ಘೋಷಣೆಗೆ ದನಿಗೂಡಿಸಿದರು.
Laxmi News 24×7