ಮೂಂಬೈ: ಬಾಲಿವುಡ್ ಕ್ಯೂಟ್ ಕಪಲಸ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮುದ್ದಾದ ಮಗಳ ಪಾಲಕರಾಗಿದ್ದಾರೆ. ಸೆಪ್ಟೆಂಬರ್ 8ರಂದು ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಗೊತ್ತೆ ಇದೆ. ಇದರೊಂದಿಗೆ ರಣವೀರ್ ಸಿಂಗ್ ಅವರ ಹಲವು ವರ್ಷಗಳ ಆಸೆ ಈಡೇರಿದೆ.
ಏಕೆಂದರೆ ಈ ಹಿಂದೆ ಅವರು ಮಗಳಿಗೆ ತಂದೆಯಾಗಬೇಕೆಂದು ಹೇಳಿದ್ದರು.
ಇಬ್ಬರೂ ತಮ್ಮ ಸಂತೋಷದ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಅಭಿನಂದೆನೆಗಳ ಮಹಾಪೂರವೆ ಹರಿಯುತ್ತಿದೆ. ಅಂದ್ಹಾಗೆ ದೀಪಿಕಾ ಪಡುಕೋಣೆ ಮುಂಬೈನ ಸೌತ್ ಎಚ್.ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಈ ಆಸ್ಪತ್ರೆಯು ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಒಡೆತನದಲ್ಲಿದೆ. ಸೆಲಿಬ್ರಿಟಿಗಳ ವಿಶ್ಗಳ ಮಧ್ಯೆ ಮುಖೇಶ್ ಅಂಬಾನಿ ಅವರು ರಣವೀರ್ ಮತ್ತು ದೀಪಿಕಾ ಮಗಳನ್ನು ನೋಡಲು ಆಸ್ಪತ್ರೆಗೆ ಹೋಗಿದ್ದರು. ತಾಯಿ ಮತ್ತು ಮಗಳನ್ನು ಭೇಟಿಯಾಗಿ ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿದರು ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮುಖೇಶ್ ಅಂಬಾನಿ ಅವರ ಕಾರು ಭಾರಿ ಭದ್ರತೆಯ ನಡುವೆ ಆಸ್ಪತ್ರೆಗೆ ಹೋಗುತ್ತಿರುವುದನ್ನು ಕಾಣಬಹುದಾಗಿದೆ.
ದೀಪಿಕಾ ಮತ್ತು ರಣವೀರ್ ಜತೆಗಿನ ಮುಖೇಶ್ ಅಂಬಾನಿ ಕುಟುಂಬದ ಬಾಂಧವ್ಯ ತುಂಬಾ ಚೆನ್ನಾಗಿದೆ. ಅನಂತ್ ಅಂಬಾನಿ ಮದುವೆಯ ಸಮಯದಲ್ಲಿನ ಘಟನೆಗಳು ಅದನ್ನು ತೋರಿಸುತ್ತದೆ. ದೀಪಿಕಾ ಮತ್ತು ರಣವೀರ್ ತಮ್ಮ ಮಗಳು ಹುಟ್ಟಿದ ಸುದ್ದಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಆಲಿಯಾ ಭಟ್‌ನಿಂದ ಹಿಡಿದು ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್, ಅರ್ಜುನ್ ಕಪೂರ್, ಪರಿಣಿತಿ ಸೇರಿದಂತೆ ಎಲ್ಲಾ ಸಿನಿಸೆಲೆಬ್ರಿಟಿಗಳು ಹಾರೈಸಿ ಮಗುವಿಗೆ ಆಶಿರ್ವಾದಿಸಿದ್ದಾರೆ.
ದೀಪಿಕಾ ಪಡುಕೋಣೆ ಇತ್ತೀಚೆಗೆ ಬಿಡುಗಡೆಗೊಂಡ ಕಲ್ಕಿ 2898 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಹಿಂದೆ ಅವರು ಫೈಟರ್ ಮತ್ತು ಪಠಾಣ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ದೀಪಿಕಾ ಪಡುಕೋಣೆ ಅವರು ಮುಂದಿನ ಸಿನಿಮಾ ಸಿಂಗಂ ಎಗೈನ್ ನವೆಂಬರ್ 1ರಂದು ತೆರೆಕಾಣಲಿದೆ. ಈ ಸಿನಿಮಾದಲ್ಲಿ ವಿಶೇಷವೆಂದರೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಈ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ಇಬ್ಬರೂ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ