Breaking News

ಗಣೇಶನ ವಿಗ್ರಹಕ್ಕೆ ಪಂಜುರ್ಲಿ ದೈವದ ಲುಕ್.! ಕರಾವಳಿಯಲ್ಲಿ ಆಕ್ರೋಶ

Spread the love

ಮುಂಬಯಿ: ರಿಷಬ್‌ ಶೆಟ್ಟಿ (Rishab Shetty) ಅವರ ʼಕಾಂತಾರʼ (Kantara) ಸಿನಿಮಾ ಬಂದ ಬಳಿಕ ತುಳುನಾಡಿನ ದೈವಗಳ ಮೇಲಿನ ನಂಬಿಕೆ ಎಲ್ಲೆಡೆ ಹಬ್ಬಿದೆ. ಆದರೆ ʼಕಾಂತಾರʼ ರಿಲೀಸ್ ಬಳಿಕ ದೈವಗಳ ವೇಷ -ಭೂಷಣ ತೊಟ್ಟು ದೈವಗಳ ಆರಾಧಕರ ಮನಸ್ಸಿಗೆ ಧಕ್ಕೆ ಆಗುವ ವಿಚಾರಗಳು ಕೂಡ ನಡೆದಿದೆ.

Kantara effect‌: ಗಣೇಶನ ವಿಗ್ರಹಕ್ಕೆ ಪಂಜುರ್ಲಿ ದೈವದ ಲುಕ್.! ಕರಾವಳಿಯಲ್ಲಿ ಆಕ್ರೋಶ

ಕರಾವಳಿಯಲ್ಲಿ ದೈವಗಳ ಆರಾಧನೆ ಇತ್ತೀಚೆಗಿನ ವರ್ಷಗಳಲ್ಲಿ ಆಚರಿಸಿಕೊಂಡು ಬಂದಿರುವಂಥದ್ದಲ್ಲ, ಸಾವಿರಾರು ವರ್ಷಗಳಿಂದಲೂ ದೈವ -ದೇವರುಗಳ ಚಾಕರಿಯನ್ನು ಮಾಡುತ್ತಾ ಬಂದಿರುವ ಅನೇಕ ಕುಟುಂಬಗಳು ನಮ್ಮಲಿದೆ.

ದೈವಗಳ ವಿಚಾರವನ್ನಿಟ್ಟುಕೊಂಡು ಹಾಸ್ಯಾಸ್ಪದವಾಗಿ ವರ್ತಿಸುವವರ ವಿರುದ್ಧ ತುಳುನಾಡಿಗರು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಅನೇಕ ಬಾರಿ ಹಲವರನ್ನು ತರಾಟೆಗೆ ತೆಗೆದುಕೊಂಡದ್ದೂ ಇದೆ.

ಮುಂಬಯಿನಲ್ಲಿನ ಗಣೇಶ್‌ ಚತುರ್ಥಿ ಹಬ್ಬಕ್ಕಾಗಿ ತಯಾರಾದ ಪಂಜುರ್ಲಿ ದೈವದ ಅವತಾರವುಳ್ಳ ಗಣೇಶನ ವಿಗ್ರಹವೊಂದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.


Spread the love

About Laxminews 24x7

Check Also

ಕಾಂಗ್ರೆಸ್ ಸರ್ಕಾರ ಇಲ್ಲಿ ಲೂಟಿ ಮಾಡಿ ಬಿಹಾರ ಚುನಾವಣೆಗೆ ಹಣ ಕಳಿಸುತ್ತಿದ್ದಾರೆ : ಮಾಜಿ ಸಿಎಂ ಜಗದೀಶ್ ಶೆಟ್ಟರ್

Spread the love ಕಾಂಗ್ರೆಸ್ ಸರ್ಕಾರ ಇಲ್ಲಿ ಲೂಟಿ ಮಾಡಿ ಬಿಹಾರ ಚುನಾವಣೆಗೆ ಹಣ ಕಳಿಸುತ್ತಿದ್ದಾರೆ : ಮಾಜಿ ಸಿಎಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ