Breaking News

ಟಾಟಾ ಕರ್ವ್‌ ಪೆಟ್ರೋಲ್‌, ಡೀಸೆಲ್‌ SUV ಮಾರುಕಟ್ಟೆಗೆ-ಆರಂಭಿಕ ಬೆಲೆ 9.99 ಲಕ್ಷ

Spread the love

ಮುಂಬೈ: ಭಾರತದ ಜನಪ್ರಿಯ ವಾಹನ ತಯಾರಿಕಾ ಕಂಪನಿಯಾದ ಟಾಟಾ ಮೋಟಾರ್ಸ್‌ (Tata Motors) ಸೋಮವಾರ (ಸೆ.02) ಹೊಸ ಇಂಧನ ಚಾಲಿತ ಟಾಟಾ ಕರ್ವ್‌ (Tata Curvv) ಎಸ್‌ ಯುವಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಪೆಟ್ರೋಲ್‌ ಚಾಲಿತ ಟಾಟಾ ಕರ್ವ್‌ ವಾಹನದ ಆರಂಭಿಕ ಬೆಲೆ 9.99 ಲಕ್ಷ ರೂಪಾಯಿ ಮತ್ತು ಡೀಸೆಲ್‌ ಚಾಲಿತ ಟಾಟಾ ಕರ್ವ್‌ ಎಸ್‌ ಯುವಿಗೆ 11.49 ಲಕ್ಷ ರೂಪಾಯಿ.

ಇದು ಆರಂಭಿಕ ಬೆಲೆಯಾಗಿದ್ದು, 2024ರ ನವೆಂಬರ್‌ ನಿಂದ ಬೆಲೆ ಏರಿಕೆಯಾಗಲಿದೆ ಎಂದು ಕಂಪನಿ ತಿಳಿಸಿದೆ.

ಕಳೆದ ತಿಂಗಳು ಟಾಟಾ ಮೋಟಾರ್ಸ್‌ Curvv Evಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು. ಇದು ಎಲೆಕ್ಟ್ರಿಕ್‌ ಎಸ್‌ ಯುವಿಯಾಗಿದ್ದು, (Ex Showroom) ಆರಂಭಿಕ ಬೆಲೆ 17.49 ಲಕ್ಷ ರೂಪಾಯಿ. ಇದೀಗ Curvv ICE ( Internal combustion engine) ಅನ್ನು ಬಿಡುಗಡೆಗೊಳಿಸಿದೆ.

Curvv ICE ಎಂಟು ಶ್ರೇಣಿಯಲ್ಲಿದ್ದು, ಆರು ಬಣ್ಣಗಳ ಆಯ್ಕೆ ಇರುವುದಾಗಿ ಟಾಟಾ ಮೋಟಾರ್ಸ್‌ ಹೇಳಿದೆ. ಕರ್ವ್‌ ಐಸಿಇ ಮೂರು ಎಂಜಿನ್‌ ಗಳು ಹಾಗೂ ಮಲ್ಟಿಪಲ್‌ ಗೇರ್‌ ಬಾಕ್ಸ್‌ ಆಯ್ಕೆಗಳಿರುವುದಾಗಿ ತಿಳಿಸಿದೆ.

ಟಾಟಾ ಕರ್ವ್‌ ಐಸಿಇ ಡಿಸೈನ್:‌

ಟಾಟಾ ಕರ್ವ್‌ (Tata Curvv) ICE ಎಸ್‌ ಯುವಿ ಬಹುತೇಕ ಟಾಟಾ ಕರ್ವ್‌ ಎಲೆಕ್ಟ್ರಿಕ್‌ ವೆಹಿಕಲ್‌ ಮಾದರಿಯನ್ನೇ ಹೋಲುತ್ತದೆ. ಟಾಟಾ ಕರ್ವ್‌ ಹಾಗೂ ಟಾಟಾ ಕರ್ವ್‌ ಇವಿ ನಡುವಿನ ವ್ಯತ್ಯಾಸ ಏನಂದರೆ ಟಾಟಾ ಕರ್ವ್‌ ಐಸಿಇ ಏರ್‌ ವೆಂಟ್ಸ್‌ ಜತೆಗೆ ಎಸ್‌ ಯುವಿ ಮುಂಭಾಗದ Grille ವಿಭಿನ್ನವಾಗಿದೆ.

ಟಾಟಾ ಕರ್ವ್‌ ನಲ್ಲಿ 4 ಸ್ಪೋಕ್‌ ಸ್ಟೇರಿಂಗ್‌ ವ್ಹೀಲ್‌ ಇದ್ದು, ಒಳಗಿನ ಕ್ಯಾಬಿನ್‌ ನಲ್ಲಿ 12.3 ಇಂಚಿನ ಇನ್‌ ಫಾರ್ಮೆಶನ್‌ ಸಿಸ್ಟಮ್‌ ನ ಟಚ್‌ ಸ್ಕ್ರೀನ್‌, 9 ಸ್ಪೀಕರ್‌ ಜೆಬಿಎಲ್‌ ಆಡಿಯೋ ಸಿಸ್ಟಂ, ಸ್ವಯಂಚಾಲಿತ ಕ್ಲೈಮೇಟ್‌ ಕಂಟ್ರೋಲ್‌ ಸಿಸ್ಟಮ್‌, ವೆಂಟಿಲೇಟೆಡ್‌ ಫ್ರಂಟ್‌ ಸೀಟ್ಸ್‌, ಆರು ಏರ್‌ ಬ್ಯಾಗ್ಸ್‌ ಗಳ ಸೇಫ್ಟಿ ಫೀಚರ್ಸ್‌, ಎಲೆಕ್ಟ್ರಾನಿಕ್‌ ಪಾರ್ಕಿಂಗ್‌ ಬ್ರೇಕ್‌ ಮತ್ತು ಟಯರ್‌ ಪ್ರೆಶರ್‌ ಮಾನಿಟರಿಂಗ್‌ ಸಿಸ್ಟಮ್‌ ಅನ್ನು ಒಳಗೊಂಡಿರುವುದಾಗಿ ಟಾಟಾ ಮೋಟಾರ್ಸ್‌ ತಿಳಿಸಿದೆ.


Spread the love

About Laxminews 24x7

Check Also

ಆನ್‌ಲೈನ್ ಗೇಮಿಂಗ್ ಪ್ರಚಾರ-ನಿಯಂತ್ರಣ ಕಾಯಿದೆ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ: ಆ.30ಕ್ಕೆ ವಿಚಾರಣೆ

Spread the love ಬೆಂಗಳೂರು: ಹಣವನ್ನು ಪಣಕ್ಕಿಟ್ಟು ಆಡುವಂತಹ ಆನ್‌ಲೈನ್​ ಗೇಮ್​ಗಳಿಗೆ ನಿಷೇಧ ಹೇರುವುದಕ್ಕೆ ಅವಕಾಶ ಕಲ್ಪಿಸುವ ಆನ್‌ಲೈನ್ ಗೇಮಿಂಗ್ ಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ