Breaking News

ಗ್ರಾಮೀಣರ ಆರ್ಥಿಕ ಬೆಳವಣಿಗೆಗೆ ಸಂಘ ಸಹಾಯಕ: ಟಿ.ಬಿ. ಕೆಂಚರಡ್ಡಿ

Spread the love

 (ಮೂಡಲಗಿ): ‘ಗ್ರಾಮೀಣ ಜನರ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರ ಸಂಘಗಳು ಬಹಳಷ್ಟು ಅನುಕೂಲವಾಗಿವೆ’ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಟಿ.ಬಿ. ಕೆಂಚರಡ್ಡಿ ಹೇಳಿದರು.

ಇಲ್ಲಿಯ ಗುರ್ಲಾಪುರ ಅರ್ಬನ್‌ ಕೋ.ಆಪ್‌ ಕ್ರೆಡಿಟ್‌ ಸೊಸೈಟಿಯ 20ನೇ ವಾರ್ಷಿಕ ಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ‘ಸಹಕಾರಿ ಸಂಸ್ಥೆಯ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ, ಸಿಬ್ಬಂದಿ, ಠೇವಣಿದಾರರು ಮತ್ತು ಸದಸ್ಯರ ಪರಸ್ಪರ ಸಹಕಾರ ಮತ್ತು ವಿಶ್ವಾಸ ಮುಖ್ಯ’ ಎಂದರು.

ಗ್ರಾಮೀಣರ ಆರ್ಥಿಕ ಬೆಳವಣಿಗೆಗೆ ಸಂಘ ಸಹಾಯಕ: ಟಿ.ಬಿ. ಕೆಂಚರಡ್ಡಿ

ಸಂಘದ ಅಧ್ಯಕ್ಷ ಶಿವಬಸು ಇಟ್ನಾಳ ಮಾತನಾಡಿ, ‘ಸಂಘವು ಪ್ರಸಕ್ತ ಮಾರ್ಚ್ ಕೊನೆಯಲ್ಲಿ ₹3 ಕೋಟಿ ದುಡಿಯುವ ಬಂಡವಾಳದೊಂದಿಗೆ ₹5.50 ಲಕ್ಷ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದರು.

ಈರಯ್ಯ ಹಿರೇಮಠ, ಶಿವರುದ್ರಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಭೀಮಪ್ಪ ಮರಾಠೆ, ಕೆ.ಆರ್. ದೇವರಮನಿ, ಎಸ್.ಎಸ್. ಮುಗಳಖೋಡ, ಕಾರ್ಯದರ್ಶಿ ಶ್ರೀಶೈಲ್ಲ ಮುಗಳಖೋಡ, ಬಸಪ್ಪ ಮುಗಳಖೋಡ, ಶಂಕರ ಮುಗಳಖೋಡ, ಮಹಾದೇವ ಕುಗೋಡ, ಪುಂಡಲೀಕ ಮುಗಳಖೋಡ, ಅಪ್ಪಯ್ಯ ಹಳ್ಳೂರ, ಮಹಾದೇವ ನಡುವಿನಕೇರಿ, ಬಸಪ್ಪ ಟಪಾಲದಾರ, ಆರ್.ಬಿ. ನೇಮಗೌಡರ, ಎ.ಜಿ. ಶರಣಾರ್ಥಿ ಇದ್ದರು.


Spread the love

About Laxminews 24x7

Check Also

ನಗರದಲ್ಲಿ ಧಾರಾಕಾರ ಮಳೆ ಹಾಗೂ ಗಾಳಿಗೆ ಬೃಹತ್ ಆಕಾರದ ಮರ ಉರುಳಿದೆ.

Spread the loveಬೆಳಗಾವಿ :ನಗರದಲ್ಲಿ ಧಾರಾಕಾರ ಮಳೆ ಹಾಗೂ ಗಾಳಿಗೆ ಬೃಹತ್ ಆಕಾರದ ಮರ ಮತ್ತು ಕೊಂಬೆಗಳು ಉರುಳಿ ಬಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ