ಬೆಂಗಳೂರು: ಲೊಕೇಷನ್ ಕಳುಹಿಸಿದ ಜಾಗಕ್ಕೆ ಬರಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕೊರಿಯರ್ ಬಾಯ್ ಗೆ ದುಷ್ಕರ್ಮಿಯೊಬ್ಬ ಚಾಕು ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಅಶೋಕನಗರದಲ್ಲಿ ಈ ಘಟನೆ ನಡೆದಿದೆ. ಚಾಕು ಇರಿತಕ್ಕೊಳಗಾದ ಯುವಕನನ್ನು ಮೊಹಮ್ಮದ್ ಶಫಿ ಎಂದು ಗುರುತಿಸಲಾಗಿದೆ.

ಕೊರಿಯರ್ ಮಾಡಲು ಕಳುಹಿಸಿದ ಲೊಕೇಷನ್ ಗೆ ಬರದೇ ಲ್ಯಾಂಡ್ ಮಾರ್ಕ್ ಕೇಳಿದ್ದಕ್ಕೆ ಕೋಪಗೊಂಡು ದುಷ್ಕರ್ಮಿ ಯುವಕನಿಗೆ ಚಾಕು ಇರಿದಿದ್ದಾನೆ. ಅಟ್ಟಾಡಿಸಿಕೊಂಡು ಚಾಕು ಇರಿದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.
ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
Laxmi News 24×7