Breaking News

ಡಿಜಿಟಲ್ ಮೀಡಿಯಾ’ಗಳಿಗೂ ಸರ್ಕಾರಿ ಜಾಹೀರಾತು: ಇದು ‘KSDMF’ಗೆ ಸಿಕ್ಕ ಮೊದಲ ಗೆಲುವು- ಅಧ್ಯಕ್ಷ ಸಮೀವುಲ್ಲಾ

Spread the love

ಬೆಂಗಳೂರು : ರಾಜ್ಯ ಸರ್ಕಾರದಿಂದ ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ 2024 ಪ್ರಕಟಿಸಲಾಗಿದೆ. ಇದು ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂಗೆ ಸಿಕ್ಕಂತ ಮೊದಲ ಗೆಲುವು ಎಂಬುದಾಗಿ ಅಧ್ಯಕ್ಷರಾದಂತ ಬಿ.ಸಮೀವುಲ್ಲಾ ಬೆಲಗೂರು ಹರ್ಷವನ್ನು ವ್ಯಕ್ತ ಪಡಿಸಿದ್ದಾರೆ.

 

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಪ್ರಸ್ತುತ ಜಗತ್ತಿನ ಮುಂಚೂಣಿ ಮಾಧ್ಯಮ ಡಿಜಿಟಲ್ ಮಾಧ್ಯಮ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಸರ್ಕಾರದ ಮಟ್ಟದಲ್ಲಿ ಡಿಜಿಟಲ್ ಮಾಧ್ಯಮಗಳ ಮಾನ್ಯತೆ ಇರಲಿಲ್ಲ. ಹೀಗಾಗಿ ಡಿಜಿಟಲ್ ಮಾಧ್ಯಮಗಳಿಗೆ ಮಾನ್ಯತೆ ದೊರಕಿಸಿಕೊಡುವ ಉದ್ದೇಶ ಹಾಗೂ ಡಿಜಿಟಲ್ ಮಾಧ್ಯಮಗಳ ವೃತ್ತಿಪರ ಪತ್ರಕರ್ತರ ಉಳಿವಿಗಾಗಿ ಟಿವಿ ಹಾಗೂ ಪತ್ರಿಕೆಗಳ ಮಾದರಿಯಲ್ಲೇ ಡಿಜಿಟಲ್ ‌ಮಾಧ್ಯಮಗಳಿಗೆ ಜಾಹೀರಾತು ಪಡೆಯುವ ಮೂಲ ಉದ್ದೇಶದಿಂದ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ಸ್ಥಾಪಿಸಲಾಗಿತ್ತು. 24-08-2022 ರಲ್ಲಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ಅಡಿಯಲ್ಲಿ ಸ್ಥಾಪಿತವಾದ ಸಂಸ್ಥೆ ಈ ದಿಸೆಯಲ್ಲಿ ಸಾಕಷ್ಟು ಶ್ರಮ ಹಾಕಿದೆ ಎಂದರು.

10-06-2023 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ವಾರ್ತಾ ಇಲಾಖೆಯ ಆಯುಕ್ತರಿಗೆ ಡಿಜಿಟಲ್ ಮಾಧ್ಯಮಗಳ ಮಾನ್ಯತೆ & ಜಾಹೀರಾತು ನೀಡುವ ಕುರಿತು ಮನವಿ ಮಾಡಲಾಗಿತ್ತು. 22-08-2023 ರಂದು ನಮ್ಮ ಮನವಿಗೆ ಪತ್ರದ ಮೂಲಕ ಉತ್ತರಿಸಿದ್ದ ವಾರ್ತಾ & ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ರಾಮಲಿಂಗಪ್ಪ ನಿಮ್ಮ ಬೇಡಿಕೆ ಪರಿಶೀಲನೆ ಹಂತದಲ್ಲಿದ್ದು ಅನುಮೋದನೆಯಾದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಸರಿಯಾಗಿ 1 ವರ್ಷದ ತರುವಾಯ ಅದೇ ದಿನಾಂಕದಂದು 22-08-2024 ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ ಬಿಡುಗಡೆಯಾಗಿದೆ. ಇದು ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂಗೆ ಸಂದ ಮೊದಲ ಜಯ ಎಂದು ಫೋರಂ ಅಧ್ಯಕ್ಷ ಬಿ ಸಮೀವುಲ್ಲಾ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಕರ್ನಾಟಕ ಡಿಜಿಟಲ್ ಮೀಡಿಯಾ ಫೋರಂ ( KSDMF ) ಶೀಘ್ರವೇ ಮುಂದಿನ ಕಾರ್ಯತಂತ್ರದ ಕುರಿತು ಸಭೆ ಸೇರಿ ನಿರ್ಧಾರ ಮಾಡುವುದಾಗಿ ಅಧ್ಯಕ್ಷರಾದ ಬಿ ಸಮೀವುಲ್ಲಾ ತಿಳಿಸಿದ್ದಾರೆ. ಇದೇ ವೇಳೆ KSDMF ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಸಗರಹಳ್ಳಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಜೊತೆಗೆ ಡಿಜಿಟಲ್ ಮಾಧ್ಯಮಗಳಿಗೆ ಮತ್ತಷ್ಟು ಶಕ್ತಿ ತುಂಬಲು ಪ್ರಯತ್ನಿಸುವುದಾಗಿ ತಿಳಿಸಿದ್ರು. ಅಲ್ಲದೇ ಡಿಜಿಟಲ್ ಮಾಧ್ಯಮಗಳ ನ್ಯೂನತೆಗಳ ಸರಿಪಡಿಸುವ ಕಡೆ ಗಮನ ಹರಿಸುವುದಾಗಿ ತಿಳಿಸಿದರು.


Spread the love

About Laxminews 24x7

Check Also

ಆನ್‌ಲೈನ್ ಗೇಮಿಂಗ್ ಪ್ರಚಾರ-ನಿಯಂತ್ರಣ ಕಾಯಿದೆ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ: ಆ.30ಕ್ಕೆ ವಿಚಾರಣೆ

Spread the love ಬೆಂಗಳೂರು: ಹಣವನ್ನು ಪಣಕ್ಕಿಟ್ಟು ಆಡುವಂತಹ ಆನ್‌ಲೈನ್​ ಗೇಮ್​ಗಳಿಗೆ ನಿಷೇಧ ಹೇರುವುದಕ್ಕೆ ಅವಕಾಶ ಕಲ್ಪಿಸುವ ಆನ್‌ಲೈನ್ ಗೇಮಿಂಗ್ ಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ