Breaking News

ಗೃಹಲಕ್ಷ್ಮೀ ಹಣದಿಂದಲೇ ಸೊಸೆಗೆ ಫ್ಯಾನ್ಸಿ ಸ್ಟೋರ್​ ಹಾಕಿಸಿದ ಅತ್ತೆ; ಜಗಳ ಆಡೋ ಅತ್ತೆ-ಸೊಸೆಯರಿಗೆ ಮಾದರಿ!

Spread the love

ಹಾವೇರಿ: ಇದು ಕಾಂಗ್ರೇಸ್ ಸರ್ಕಾರದ (Congress Govt) ಮಹತ್ವಕಾಂಕ್ಷಿ ಜನಪರ ಯೋಜನೆ. ಈ ಯೋಜನೆಯ ಹಣದಿಂದ ಮಹಿಳೆಯರು ಗೃಹೋಪಯೋಗಿ (Home Appliances) ವಸ್ತುಗಳನ್ನು ಖರೀದಿ ಮಾಡಿದ್ದಾರೆ. ಮೊನ್ನೆ ತಾನೇ ಅಜ್ಜಿಯೊಬ್ಬರು ಊರಿಗೆ ಹೋಳಿಗೆ ಊಟ ಹಾಕಿಸಿದ್ದು ಇದೇ ಗೃಹಲಕ್ಷ್ಮಿ (Gruha Lakshmi Scheme) ಹಣದಿಂದಲೇ.

ಇದೀಗ ಇದರ ಬೆನ್ನಲ್ಲೇ ಗೃಹಲಕ್ಷ್ಮಿ ಹಣದಿಂದ ಮತ್ತೊಂದು ಅಪರೂಪ ಘಟನೆಯೊಂದು ನಡೆದಿದೆ. ಸೊಸೆ ಪಾಲಿಗೆ ಅತ್ತೆ ದಾರಿದೀಪವಾಗಿರುವ ವರದಿ ಇಲ್ಲಿದೆ.

ಗೃಹಲಕ್ಷ್ಮೀ ಹಣದ 10 ಕಂತಿನ ಹಣ ಕೊಟ್ಟು ಅಂಗಡಿ ಓಪನ್

ನೂತನ ಅಂಗಡಿಗೆ ವಿಶೇಷ ಪೂಜೆ,ಅಂಗಡಿಯಲ್ಲಿರೋ ಫ್ಯಾನ್ಸಿ ಸಾಮಾಗ್ರಿಗಳು, ಬಳೆಗಳು. ಸಂಭ್ರಮದಿಂದ‌ ಮನೆಯ ಸದಸ್ಯರು ಫ್ಯಾನ್ಸಿ ಸ್ಟೋರ್ ಗೆ ಚಾಲನೆ. ಹೌದು ಇದು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ನೀರಲಗಿ ಗ್ರಾಮದಲ್ಲಿ ಕಂಡುಬಂದ ದೃಶ್ಯಗಳಿವು.


ಅತ್ತೆ-ಸೊಸೆ

ಸೊಸೆ ಹೊರಗೆ ಕೆಲಸಕ್ಕೆ ಹೋಗಬಾರದೆಂದು ಮನೆಯಲ್ಲೇ ಫ್ಯಾನ್ಸಿ ಸ್ಟೋರ್ ಇಟ್ಟುಕೊಟ್ಟ ಅತ್ತೆ ಕಾರ್ಯಕ್ಕೆ ಈಗ ಜನ ಶಹಬ್ಬಾಸ್ ಅಂತಿದ್ದಾರೆ.ಎಸ್ ನೀರಲಗಿ ಗ್ರಾಮದ ದ್ರಾಕ್ಷಾಯಿಣಿ ಎಂಬುವವರು ತಮ್ಮ 10 ಕಂತಿನ 20 ಸಾವಿರ ಗೃಹ ಲಕ್ಷ್ಮಿ ಹಣ ಕೂಡಿಟ್ಟಿದ್ದರು. ತಮ್ಮ ಸೊಸೆ ಕುಮಾರಿ ಪಾಟೀಲ್ ಗೆ ಫ್ಯಾನ್ಸಿ ಸ್ಟೋರ್ ಇಟ್ಟುಕೊಟ್ಟು ಉದಾರತೆ ಮೆರೆದಿದ್ದಾರೆ. ಹಣಕ್ಕಾಗಿ ಜಗಳವಾಡೊ ಅತ್ತೆ-ಸೊಸೆಯಂದರ ಮಧ್ಯೆ ಇವರ ಕಾರ್ಯ ಮಾದರಿಯಾಗಿದೆ.

ಶ್ರಾವಣದ ಶುಭದಿನದಂದೇ ಫ್ಯಾನ್ಸಿ ಸ್ಟೋರ್ ಗೆ ಪೂಜೆ ಮಾಡಿ ಚಾಲನೆ ನೀಡಲಾಗಿದೆ. ಅಂಗಡಿಯನ್ನು ಸಂಭ್ರಮದಿಂದ ಶುರು ಮಾಡಿದ ಅತ್ತೆ – ಸೊಸೆ ಪರಸ್ಪರ ಭಾವುಕರಾದರು. ಸೊಸೆ ಮಗಳಿದ್ದಂಗೆ, ಅವಳು ಹೊರಗೆ ದುಡಿಯೋಕೆ ಹೋಗೋದು ಬೇಡ ಅಂತ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟಿದ್ದಾರೆ. ಹತ್ತು ಕಂತಿನ ಹಣವನ್ನ ಕೂಡಿಯಿಟ್ಟು ನಮ್ಮ ಅತ್ತೆ ಮಾವ ನನಗೆ ಅಂಗಡಿ ಹಾಕಿಕೊಟ್ಟಿದ್ದಾರೆ. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಕೂಲಿ ಕೆಲಸ ಹಾಗೂ ಹೊಲಕ್ಕೆ ಹೋಗಬೇಕಾದ‌ ಸ್ಥಿತಿ ಇದೆ. ಆದರೆ ಆ ಕಷ್ಟ ಬೇಡ ಅಂತಾ ಗೃಹಲಕ್ಷ್ಮೀ ಹಣದಿಂದ ಅಂಗಡಿ ಪ್ರಾರಂಭ ಮಾಡಿದ್ದೇವೆನ್ನುತ್ತಾಳೆ ಸೊಸೆ.


Spread the love

About Laxminews 24x7

Check Also

ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ​ ತೀರ್ಮಾನಕ್ಕೆ ನಾನು ಬದ್ಧ: ಸಿಎಂ

Spread the loveಮೈಸೂರು: “ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ ಮತ್ತು ಹೈಕಮಾಂಡ್​ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡುತ್ತಾರೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ