Breaking News

ಕೈದಿಗಳಿಗೆ ಇನ್ಮುಂದೆ ‘ಹಾಟ್‌ಬಾಕ್ಸ್‌’ನಲ್ಲಿ ಊಟ

Spread the love

ಮೈಸೂರು: ಇಲ್ಲಿನ ಕೇಂದ್ರ ಕಾರಾಗೃಹದ ಕೈದಿಗಳಿಗೆ ನೀಡುವ ಊಟವನ್ನು ಇದೇ ಮೊದಲ ಬಾರಿಗೆ ‘ಹಾಟ್‌ಬಾಕ್ಸ್‌’ನಲ್ಲಿ ಕೊಡುವುದಕ್ಕೆ ತಯಾರಿ ಆರಂಭವಾಗಿದೆ. ‘ಈ ಉಪಕ್ರಮದ ಮೂಲಕ ತಟ್ಟೆಯಲ್ಲಿ ಊಟ ಪಡೆಯುವುದು, ತಣ್ಣಗಾದ ಆಹಾರ ಸೇವಿಸುವ ಪ್ರಮೇಯ ತಪ್ಪಲಿದೆ’ ಎಂಬ ಆಶಯವನ್ನು ಇಲಾಖೆ ಹೊಂದಿದೆ.

ಮೈಸೂರು: ಕೈದಿಗಳಿಗೆ ಇನ್ಮುಂದೆ 'ಹಾಟ್‌ಬಾಕ್ಸ್‌'ನಲ್ಲಿ ಊಟ

ಸದ್ಯ 810 ಕೈದಿಗಳಿರುವ ಕಾರಾಗೃಹದಲ್ಲಿ ನಿತ್ಯ ಸಂಜೆ 6.30ರೊಳಗೆ ರಾತ್ರಿ ಊಟ ವಿತರಿಸಲಾಗುತ್ತದೆ. ತಟ್ಟೆಗಳಲ್ಲಿ ಊಟ ಪಡೆಯುವ ಕೈದಿಗಳು ರಾತ್ರಿ ವೇಳೆ ಊಟ ಮಾಡುತ್ತಿದ್ದರು. ಅಷ್ಟರ ವೇಳೆಗೆ ಊಟವು ತಣ್ಣಗಾಗಿರುತ್ತಿತ್ತು. ಕೈದಿಗಳ ಆರೋಗ್ಯದ ದೃಷ್ಟಿಯಿಂದ ಬಿಸಿಯಾದ ಆಹಾರ ಸಿಗುವಂತೆ ಮಾಡಲು ‘ಹಾಟ್‌ಬಾಕ್ಸ್’ ಖರೀದಿಸಲಾಗುತ್ತಿದೆ. ಯೋಜನೆ ಅನುಷ್ಠಾನಕ್ಕಾಗಿ ಕಾರಾಗೃಹ ಇಲಾಖೆಯ ಹಣಕಾಸು ವಿಭಾಗಕ್ಕೆ ಮಂಜೂರಾತಿಗಾಗಿ ಪತ್ರವನ್ನು ಬರೆದಿದ್ದು, ಅನುಮೋದನೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

ಹಾಟ್‌ಬಾಕ್ಸ್ ದರಪಟ್ಟಿ ಆಹ್ವಾನ: ನೋಂದಾಯಿತ ವರ್ತಕರು ಹಾಗೂ ಸಂಸ್ಥೆಗಳಿಂದ 10, 20, 30 ಲೀಟರ್‌ಗಳ 24 ಹಾಟ್‌ಬಾಕ್ಸ್‌ಗಳ ಖರೀದಿಗಾಗಿ ಜಿಎಸ್‌ಟಿ ಸಹಿತ ದರಪಟ್ಟಿಯನ್ನು ಕಾರಾಗೃಹವು ಆಹ್ವಾನಿಸಿದೆ. ಪಟ್ಟಿಯನ್ನು ಸೆ.5ರ ಸಂಜೆ 4 ಗಂಟೆ ಒಳಗೆ ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್‌ ಅವರಿಗೆ ನೀಡುವಂತೆ ಕೋರಲಾಗಿದೆ.

‘ಕಾರಾಗೃಹದಲ್ಲಿ ವಿವಿಧ ಬ್ಯಾರಕ್‌ಗಳಿದ್ದು, ಒಂದೊಂದರಲ್ಲಿ 15ರಿಂದ 30 ಕೈದಿಗಳು ಇದ್ದಾರೆ. ಪ್ರತಿ ಬ್ಯಾರಕ್‌ಗೆ ಅನುಗುಣವಾಗಿ 10, 20, 30 ಲೀಟರ್‌ ಸಾಮರ್ಥ್ಯದ ಹಾಟ್‌ಬಾಕ್‌ ವಿತರಿಸಲು ಸಿದ್ಧತೆ ನಡೆಸಲಾಗಿದೆ. ಅವುಗಳನ್ನು ಬ್ಯಾರಕ್‌ನಲ್ಲಿರುವ ಕೈದಿಗಳ ಸಂಖ್ಯೆ ಆಧರಿಸಿ ಹಂಚಿಕೆ ಮಾಡಲಾಗುತ್ತದೆ. ಅದರಲ್ಲಿ ನಿಗದಿತ ಪ್ರಮಾಣದ ಆಹಾರವನ್ನು ಒದಗಿಸಲಾಗುವುದು. ಅಲ್ಲಿರುವವರು ಹಸಿವಾದಾಗ ಊಟ ತೆಗೆದುಕೊಂಡು ಮಾಡಬಹುದು. ಇದರ ಉಸ್ತುವಾರಿಗೆ ಒಬ್ಬರನ್ನು ನಿಯೋಜಿಸಲಾಗುತ್ತದೆ’ ಎಂದು ಚೀಫ್ ಸೂಪರಿಂಟೆಂಡೆಂಟ್‌ ಪಿ.ಎಸ್‌.ರಮೇಶ್‌  ತಿಳಿಸಿದರು.


Spread the love

About Laxminews 24x7

Check Also

ಬೆಣ್ಣೆನಗರಿಗೆ ಬರಲಿದೆ ಐಟಿ ಪಾರ್ಕ್

Spread the loveದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು. ಪ್ರಗತಿಯತ್ತ ಸಾಗುತ್ತಿರುವ ದಾವಣಗೆರೆಯಲ್ಲಿ ಐಟಿಬಿಟಿ ಕಂಪನಿಗಳು ಕರೆತರಲು ಇಲ್ಲಿಲ್ಲದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ